ಹೈದರಾಬಾದ್​ಗೆ ಆಗಮಿಸಿದ್ದ ಪ್ರಧಾನಿ ಮೋದಿ ಸ್ವಾಗತಕ್ಕೆ ಬಾರದ ತೆಲಂಗಾಣ ಸಿಎಂ.. ಕಾರಣವೇನು..?


ಹೈದರಾಬಾದ್​​: ಇಂದು ಹೈದರಾಬಾದ್​​ನ ಶಂಶಾಬಾದ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 216 ಅಡಿ ಎತ್ತರದ ಸಮಾನತೆ ಪ್ರತಿಮೆ ಅನಾವರಣೆ ಮಾಡಿದರು. ಇದು ಶ್ರೀ ರಾಮಾನುಜಾಚಾರ್ಯರ ಬೋಧನೆಗಳನ್ನು ಸ್ಮರಿಸುವ ಪ್ರತಿಮೆ ಆಗಿದೆ. ಸುಮಾರು 45 ಎಕರೆ ವಿಸ್ತೀರ್ಣದ ಆವರಣದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸಲು ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ, ಸ್ವಾಗತ ಕೋರಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಗೈರಾಗಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ತೆಲಂಗಾಣ ಸಿಎಂ ಗೈರಾಗಿರುವ ವಿಚಾರ ಇದೀಗ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಈ ಹಿಂದೆಯೂ ಪ್ರಧಾನಿ ಮೋದಿ​ ಹೈದರಾಬಾದ್​ಗೆ ಬಂದಿದ್ದಾಗ ಕಾರಣಾಂತರಗಳಿಂದ ಕೆಸಿಆರ್​ ಸ್ವಾಗತ ಮಾಡಿಕೊಳ್ಳಲು ಆಗಮಿಸಿರಲಿಲ್ಲ. ಇದು ಸಾಕಷ್ಟು ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಇಂದು ಕೂಡ ಕೆಸಿಆರ್​ ಸ್ವಾಗತಕ್ಕೆ ಆಗಮಿಸದೇ ಇರೋದು ಸಾಕಷ್ಟು ಟೀಕೆಗಳಿಗೆ ಕಾರಣವಾಗುತ್ತಿದೆ.

News First Live Kannada


Leave a Reply

Your email address will not be published.