ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5 ರಂದು ಸಮಾನತೆಯ ಪ್ರತೀಕ, 11ನೇ ಶತಮಾನದ ಸಾಮಾಜಿಕ ಸುಧಾರಣೆಯ ಹರಿಕಾರ ರಾಮಾನುಜಾಚಾರ್ಯರ 216 ಅಡಿ ಎತ್ತರದ ಏಕತೆಯ ಪ್ರತಿಮೆಯನ್ನ ಹೈದರಾಬಾದ್ನಲ್ಲಿ ಅನಾವರಣ ಮಾಡಲಿದ್ದಾರೆ.
45 ಎಕರೆ ಜಾಗದಲ್ಲಿ ಭವ್ಯ ಕಾಂಪ್ಲೆಕ್ಸ್
ಶಂಶಾಬಾದ್ ಸಿಟಿಯಲ್ಲಿ 45 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಕಾಂಪ್ಲೆಕ್ಸ್ನಲ್ಲಿ ಭವ್ಯ ಪ್ರತಿಮೆ ತೆಲೆ ಎತ್ತಿದೆ. ಈ ಪ್ರತಿಮೆಯನ್ನ ಸಮಾನತೆಯ ಪ್ರತಿಬಿಂಬ ಎಂದು ಬಣ್ಣಿಸಲಾಗಿದೆ. 11ನೇ ಶತಮಾನದ ಭಕ್ತಿ ಸಂತ ರಾಮಾನುಜಾಚಾರ್ಯರ ಪ್ರತಿಮೆಯನ್ನ ಫೆಬ್ರವರಿ 5 ರಂದು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕಾರ್ಯಕ್ರಮದ ವೇಳೆ ವಿಶೇಷ 1,035 ‘ಯಾಗ ನಡೆಯಲಿದೆ. ಇದು ಆಧುನಿಕ ಇತಿಹಾಸದಲ್ಲಿ ಅತಿದೊಡ್ಡ ಪೂಜಾ ಕಾರ್ಯಕ್ರಮ ಎಂದು ಹೇಳಲಾಗಿದೆ. ಮಾತ್ರವಲ್ಲ ರಾಮಾನುಜ ಸಹಸ್ರಾಬ್ದಿ ಸಮಾರೋಹಂ (Ramanuja Sahasrabdi Samaroham) ಭಾಗವಾಗಿ ಸಾಮೂಹಿಕ ಮಂತ್ರ-ಪಠಣ ಸೇರಿದಂತೆ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಗಣ್ಯರಿಗೆ ಆಹ್ವಾನ
ಸಂತನ ಸಾವಿರ ಜನ್ಮೋತ್ಸವ ಸಂಭ್ರಮದಲ್ಲಿ ನಡೆಯುವ ಈ ಕಾರ್ಯಕ್ರಮವು ಫೆಬ್ರವರಿ 2 ರಿಂದಲೇ ಶುರುವಾಗಲಿದೆ. ಕಾರ್ಯಕ್ರಮವು ಆಧ್ಯಾತ್ಮಿಕ ಗುರು ಚಿನ್ನ ಜೀಯರ್ ಸ್ವಾಮಿ ಹಾಗೂ ತೆಲಂಗಾಣ ಸಿಂಎ ಕೆ.ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಆಯೋಜನೆಗೊಂಡಿದೆ. ಇತರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ, ರಾಜಕಾರಣಿಗಳಿಗೆ, ಸಿನಿಮಾ ತಾರೆಯರು, ಕ್ರೀಡಾ ಸಾಧಕರು ಸೇರಿ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
1000 ಕೋಟಿ ದೇಣಿಗೆ ನೀಡಿದ ಭಕ್ತರು
ಸಾವಿರ ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಸಂಪೂರ್ಣಗಿ ಭಕ್ತರಿಂದ ದೇಣಿಗೆ ಪಡೆದು ಸಂಗ್ರಹಿಸಲಾಗಿದೆ. ಸಂತ ರಾಮಾನುಜಾಚಾರ್ಯ ದೇಗುಲದ ಒಳಗಿನ ವಿಗ್ರಹವನ್ನ 120 ಕೆಜಿ ಚಿನ್ನದಿಂದ ಮಾಡಲಾಗಿದೆ. ಇದನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆಬ್ರವರಿ 13 ರಂದು ಲೋಕಾರ್ಪಣೆ ಮಾಡಲಿದ್ದಾರೆ. ದೇವಾಲಯದ ಹೊರಂಗಾಣದಲ್ಲಿರುವ 216 ಅಡಿ ಎತ್ತರದ ಸ್ಟ್ಯಾಚು ರಾಮಾನುಚಾರ್ಯರು ಕುಳಿತುಕೊಂಡಿರುವ ಭಂಗಿಯಲ್ಲಿದೆ. ಕುಳಿತುಕೊಂಡಿರುವ ಭಂಗಿಯಲ್ಲಿರುವ ಈ ಪ್ರತಿಮೆ ಅತೀ ಎತ್ತರದ ಸ್ಟ್ಯಾಚುಗಳಲ್ಲಿ ಒಂದಾಗಿದೆ.
120 ಕೆಜಿ ಚಿನ್ನ ಬಳಕೆ
ಐದು ಲೋಹಗಳ ಮಿಶ್ರಣವಾದ ಪಂಚಲೋಹದಿಂದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಜಿಂಕ್ನಿಂದ ಮಾಡಲಾಗಿದೆ. 1017ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜನಿಸಿದ ರಾಮಾನುಜಾಚಾರ್ಯರು, ಸಾಮಾಜಿಕ ಸುಧಾರಣೆಯಲ್ಲಿ ತಮ್ಮನ್ನ ತೊಡಗಿಸಿಕೊಂಡರು. ಲಕ್ಷಾಂತರ ಜನರನ್ನು ಸಾಮಾಜಿಕ, ಸಾಂಸ್ಕೃತಿಕ, ಲಿಂಗ, ಶೈಕ್ಷಣಿಕ ಮತ್ತು ಆರ್ಥಿಕ ತಾರತಮ್ಯದಿಂದ ಮುಕ್ತಗೊಳಿಸಿದರು. ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ, ಮನುಷ್ಯರೆಲ್ಲರೂ ಒಂದೆ ಎಂದು ಸಾರಿದ್ದರು.
2014ರಲ್ಲಿ ಕಾಂಪ್ಲೆಕ್ಸ್ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 54 ಫೀಟ್ ಎತ್ತರ ಇಲ್ಲಿರುವ ಕಟ್ಟಡಕ್ಕೆ ‘ಭದ್ರ ಬೇಡಿ’ ಎಂದು ಹೆಸರು ಇಡಲಾಗಿದೆ. ಇಲ್ಲಿ ಡಿಜಿಟಲ್ ಲೈಬ್ರರಿ, ರಿಸರ್ಚ್ ಸೆಂಟರ್, ಪುರಾತನ ಲಿಫಿಗಳು, ಮಂದಿರ, ಎಜುಕೇಶನ್ ಗ್ಯಾಲರಿ ಈ ಕಾಂಪ್ಲೆಕ್ಸ್ನಲ್ಲಿ ಇದೆ.