ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದಿಳಿದ ಪ್ರಕಾಶ್​​ ರೈ, ನಟ ಶ್ರೀಕಾಂತ್​​


ಸ್ಯಾಂಡಲ್​​ವುಡ್​​​ ನಟ ಪುನೀತ್​​ ರಾಜ್​​ಕುಮಾರ್​​ ನುಡಿ ನಮನಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಗಾಯತ್ರಿ ವಿಹಾರ್​ ಮೈದಾನದ ಮಂಟಪದಲ್ಲಿ ಇದಕ್ಕಾಗಿ ಭಾರೀ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಪುನೀತ್​ ರಾಜಕುಮಾರ್​ಗೆ ನಮನ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಸ್ಟೇಜ್​ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 2,000 ಆಸನಗಳನ್ನ ವ್ಯವಸ್ಥೆ ಮಾಡಲಾಗಿದೆ. ರಾಜಕುಮಾರ್​ ಕುಟುಂಬಕ್ಕೆ 2 ಸಾಲುಗಳನ್ನ ಮೀಸಲು ಇಡಲಾಗಿದೆ. ಪುನೀತ್​​ ನುಡಿ ನಮನಕ್ಕೆ ಕಾಲಿವುಡ್​​, ಬಾಲಿವುಡ್​​​, ಟಾಲಿವುಡ್​​ ಗಣ್ಯರು ಆಗಮಿಸುತ್ತಿದ್ದಾರೆ.

ಇನ್ನು, ಬಹುಭಾಷಾ ನಟ ಪ್ರಕಾಶ್ ರೈ ಹಾಗೂ ಶ್ರೀಕಾಂತ್​ ಹೈದರಾಬಾದ್​​ನಿಂದ​​ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ಇಂಟರ್​ನ್ಯಾಷನಲ್​​ ಏರ್​​​ಪೋರ್ಟ್​ನಿಂದ ಗಾಯತ್ರಿ ವಿಹಾರ್​ ಮೈದಾನದ ಮಂಟಪತ್ತ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ‘ಸೂರ್ಯ’ನೇ ಟಾರ್ಗೆಟ್‌, ಹಲ್ಲೆ ಮಾಡಿದ್ರೆ ₹1 ಲಕ್ಷ ಘೋಷಣೆ -‘ಜೈ ಭೀಮ್‌’ ಹೊಸ ವಿವಾದ ಏನು ಗೊತ್ತಾ?

News First Live Kannada


Leave a Reply

Your email address will not be published. Required fields are marked *