ಹೈವೇನಲ್ಲಿ ತಲ್ವಾರ್​ ಹಿಡಿದು ವೀಲ್ಹಿಂಗ್ ಮಾಡಿದ ಪುಂಡರು: ವಿಡಿಯೋ ವೈರಲ್​​


ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡ ಯುವಕರ ವೀಲ್ಹಿಂಗ್ ಕ್ರೇಜ್‍ ಮಿತಿಮೀರಿದ್ದು ಕೈಯಲ್ಲಿ ತಲ್ವಾರ್​ ಹಿಡಿದು ಯುವಕರ ಗುಂಪು  ವೀಲ್ಹಿಂಗ್ ಮಾಡಿದೆ.

ಯುವಕರ ಡೆಡ್ಲಿ ವೀಲ್ಹಿಂಗ್​ಗೆ ಪ್ರತಿನಿತ್ಯ ಚನ್ನರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ. ಮೂರು ಬೈಕ್​ನಲ್ಲಿ ವೀಲ್ಹಿಂಗ್ ಮಾಡಿದ ಯುವಕರು ಕೈಯಲ್ಲಿ ತಲ್ವಾರ್​ ಜಳಪಿಸಿ ಮೆರೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರು ಕ್ಯಾರೆ ಎನ್ನದ ಪೋಲಿ ಬಾಯ್ಸ್ ಪುಂಡಾಟಕ್ಕೆ, ಇತರ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಹೋಗುವ ಪರಿಸ್ಥಿತಿ ಎದುರಾಗಿದೆ. ಸದ್ಯ ಪುಂಡರ ಈ ಡೆಡ್ಲಿ ವೀಲ್ಹಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್​ ವೀಲ್ಹಿಂಗ್​: ಪೋಲಿ ಬಾಯ್ಸ್​ ಪುಂಡಾಟಕ್ಕೆ ಹೈರಾಣಾದ ಸವಾರರು

News First Live Kannada


Leave a Reply

Your email address will not be published. Required fields are marked *