ಹೈ ವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ ಸಹೋದರರಿಬ್ಬರ ದುರ್ಮರಣ; ರಕ್ಷಣೆಗೆ ಬಂದ ಮೂರನೇಯವನಿಗೂ ಶಾಕ್​ | 2 Brothers killed by Electric Shock In Delhi


ಹೈ ವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ ಸಹೋದರರಿಬ್ಬರ ದುರ್ಮರಣ; ರಕ್ಷಣೆಗೆ ಬಂದ ಮೂರನೇಯವನಿಗೂ ಶಾಕ್​

ಸಾಂಕೇತಿಕ ಚಿತ್ರ

11 ಸಾವಿರ ವೋಲ್ಟೇಜ್​ ವಿದ್ಯುತ್​ ಇರುವ ವೈರ್​​ ಸ್ಪರ್ಶಿಸಿ ಇಬ್ಬರು ಸೋದರರು ದುರ್ಮರಣಕ್ಕೀಡಾದ ಘಟನೆ ದೆಹಲಿಯ ರೋಹಿಣಿ ಏರಿಯಾದಲ್ಲಿ ನಡೆದಿದೆ. ವಿದ್ಯುತ್​ ತಂತಿಯನ್ನು ಸ್ಪರ್ಶಿಸಿ ಶಾಕ್​ಗೆ ಒಳಗಾಗಿದ್ದ ಇವರಿಬ್ಬರನ್ನೂ ರಕ್ಷಿಸಲು ಇವರ ಇನ್ನೊಬ್ಬ ಸೋದರ ಪ್ರಯತ್ನಿಸಿದಾಗ ಅವರಿಗೂ ಶಾಕ್​ ತಗುಲಿದೆ. ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಗೋವಿಂದ್​ ಮತ್ತು ದೇವೇಂದ್ರ ಎಂದು ಗುರುತಿಸಲಾಗಿದೆ. ಬೇಗಂಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 

ಮನೆಯ ಟೆರೇಸ್​​ನಲ್ಲಿ ಇದ್ದ ವಿದ್ಯುತ್​ ತಂತಿ ಸ್ಪರ್ಶಿಸಿದ್ದರಿಂದ ಈ ಅವಘಡ ನಡೆದಿದೆ. ಮೊದಲು ಒಬ್ಬಾತನಿಗೆ ಶಾಕ್​ ತಗುಲಿದೆ. ಆತ ಕೂಗಿದ್ದನ್ನು ಕೇಳಿ ಬಂದ ಇನ್ನೊಬ್ಬಾತ ರಕ್ಷಿಸುವ ಸಲುವಾಗಿ ಅವನನ್ನು ಹಿಡಿದುಕೊಂಡಿದ್ದಾನೆ. ಆಗ ಅವನಿಗೂ ವಿದ್ಯುತ್​ ಶಾಕ್​ ತಗುಲಿದೆ. ಇವರಿಬ್ಬರ ಗಲಾಟೆ ಕೇಳಿ ಬಂದ ಮೂರನೇಯವನು ಇವರಿಬ್ಬರ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಆದರೆ ಅವನಿಗೂ ಶಾಕ್​ ಹೊಡೆದು ಬಿದ್ದಿದ್ದಾನೆ. ಉಳಿದವರಿಬ್ಬರ ಜೀವ ಹೋಗಿದ್ದು, ಮೂರನೇಯವನು ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ಬರ್ನಲ್ ಸಿದ್ದಿಕಿ ಅರೆಸ್ಟ್, ಇವನ ಹೈಡ್ರಾಮಾಕ್ಕೆ ಬೆರಗಾದ ಪೊಲೀಸರು ಜೈಲಿಗಟ್ಟುದ್ರು

TV9 Kannada


Leave a Reply

Your email address will not be published. Required fields are marked *