ಹೊಂಗನಸು: ಮಹೇಂದ್ರನಿಗೆ ಮರೆಯಲಾಗದ ಗಿಫ್ಟ್ ನೀಡಿದ ರಿಷಿಯನ್ನು ತಬ್ಬಿಕೊಂಡ ವಸುಧರಾ – Honganasu Serial Update: Vasudhara shares beautiful moment with Rishi


Honganasu Serial Update: ತನ್ನ ಮನೆಗೆ ವಾಪಸ್ ಬರಬೇಕೆಂದು ಜಗತಿಗೆ ಆಸೆ ಇದೆ. ಆದರೂ ಕೂಡ ತನ್ನನ್ನು ತಾಯಿ ಅಂತ ರಿಷಿ ಒಪ್ಪಿಕೊಳ್ಳದೇ ಹೇಗೆ ಬರುವುದು ಎಂದು ಆಕೆಗೆ ದೊಡ್ಡ ತಲೆನೋವಾಯಿತು.

ಹೊಂಗನಸು: ಮಹೇಂದ್ರನಿಗೆ ಮರೆಯಲಾಗದ ಗಿಫ್ಟ್ ನೀಡಿದ ರಿಷಿಯನ್ನು ತಬ್ಬಿಕೊಂಡ ವಸುಧರಾ

ಹೊಂಗನಸು ಸೀರಿಯಲ್

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ತಂದೆಯ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುವುದು ಹೇಗೆಂದು ರಿಷಿಗೆ ದೊಡ್ಡ ತಲೆನೋವಾಗಿದೆ. ಹುಟ್ಟುಹಬ್ಬ ಆಚರಿಸಿಕೊಂಡರೆ ಎಲ್ಲರೂ ಜೊತೆಯಲ್ಲಿ ಇರಬೇಕೆಂದು ಮಹೇಂದ್ರ ಹಾಕಿದ್ದ ಕಂಡೀಷನ್ ರಿಷಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿವರ್ಷ ಅಪ್ಪನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದ ರಿಷಿ, ಈ ವರ್ಷ ಹೇಗೆ ಎಂದು ಯೋಚಿಸಿ ದೊಡ್ಡ ಪ್ಲಾನ್ ಮಾಡಿದ.

ತಂದೆಯ ಹಟ್ಟುಹಬ್ಬವನ್ನು ಅವರು ಅಂದುಕೊಂಡಂತೆ ಆಚರಿಸಲು ರಿಷಿ ಎಲ್ಲಾ ತಯಾರಿ ಮಾಡಿದ. ಎಜುಕೇಶನ್ ಮಿನಿಸ್ಟರ್‌ಗೆ ಸನ್ಮಾನ ಮಾಡುವ ನೆಪದಲ್ಲಿ ಅಪ್ಪನ ಹುಟ್ಟುಹಬ್ಬವನ್ನು ಮಾಡಲು ರಿಷಿ ನಿರ್ಧರಿಸಿದ. ಎಲ್ಲಾ ತಯಾರಿ ಮಾಡಿಕೊಂಡ. ತನ್ನ ಮನೆಗೆ ಬರುವಂತೆ ಮಿನಿಸ್ಟರ್‌ಗೆ ಅಹ್ವಾನ ನೀಡಿದ. ತಂದೆಯನ್ನು ಕೂಡ ಮನೆಗೆ ಕರೆದ. ಮಹೇಂದ್ರ ಮತ್ತು ಜಗತಿಯನ್ನು ಮನೆಗೆ ಕರ್ಕೊಂಡು ಬರುವ ಜವಾಬ್ದಾರಿಯನ್ನು ವಸುಗೆ ವಹಿಸಿದ ರಿಷಿ. ಮನೆಯನ್ನು ಸುಂದರವಾಗಿ ಅಲಂಕರಿಸಿದ. ವಸುಧರಾ ಬೆಳಗ್ಗೆಯೇ ರಿಷಿ ಮನೆಗೆ ಬಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಳು. ಒಬ್ಬಳೇ ಬಂದ ವಸುಗೆ ಮಹೇಂದ್ರ ಮತ್ತು ಜಗತಿ ಯಾಕೆ ಬಂದಿಲ್ಲ ಎಂದು ರಿಷಿ ಕೇಳಿದ. ಬರ್ತಾ ಇದ್ದಾರೆ ಎಂದು ವಸು ಹೇಳಿದಳು. ಮನೆಯ ಸಂಭ್ರಮ ದೇವಯಾನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಷ್ಟರಲ್ಲೇ ಮಹೇಂದ್ರ ಮತ್ತು ಜಗತಿ ಎಂಟ್ರಿ ಕೊಟ್ಟರು.

ಇಬ್ಬರೂ ಕಾರಿನಿಂದ ಇಳಿಯುತ್ತಿದ್ದಂತೆ ಮನೆಯವರು ಮಹೇಂದ್ರನಿಗೆ ಜನ್ಮದಿನದ ಶುಭಾಶಯ ತಿಳಿಸಿದರು. ರಿಷಿ ಮಾತ್ರ ಅಪ್ಪನಿಗೆ ವಿಶ್ ಮಾಡದೆ ಹಾಗೆ ನಿಂತಿದ್ದ. ವಿಶ್​ ಮಾಡಲ್ವಾ ಅಂತ ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಆದರೆ ತಂದೆಗೆ ಹಗ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ ರಿಷಿ. ಮಗನ ವಿಶ್‌ನಿಂದ ಮಹೇಂದ್ರ ಫುಲ್ ಖುಷ್ ಆದ. ಎಲ್ಲರೂ ಮನೆಯೊಳಗೆ ಹೋದರು. ಜಗತಿಯನ್ನು ನೋಡಿದ ದೇವಯಾನಿ, ‘ಇಲ್ಲೇ ಪರ್ಮನೆಂಟ್ ಆಗಿ ಇರೋಕೆ ಬಂದಿದ್ದೀಯಾ ಅಂತ ಅಂದುಕೊಳ್ಳಬೇಡ’ ಎಂದು ಟಾಂಗ್ ನೀಡಿದಳು. ಜಗತಿ ಕೂಡ ಅಕ್ಕ ದೇವಯಾನಿಗೆ ಸರಿಯಾಗಿ ತಿರುಗೇಟು ನೀಡಿದಳು. ಅಷ್ಟರಲ್ಲೇ ಎಜುಕೇಶನ್ ಮಿನಿಸ್ಟರ್ ಕೂಡ ಬಂದರು. ರಿಷಿ ಕುಟುಂಬ ಅದ್ದೂರಿಯಾಗಿ ಸ್ವಾಗತ ಮಾಡಿ ಮನೆಯೊಳಗೆ ಬರಮಾಡಿಕೊಂಡರು.

ಮಿನಿಸ್ಟರ್‌ಗೆ ಸನ್ಮಾನ ಮಾಡುವ ಕಾರ್ಯ ಮುಗಿದ ಬಳಿಕ ಮಹೇಂದ್ರನ ಹುಟ್ಟುಹಬ್ಬದ ಆಚರಣೆ ಪ್ರಾರಂಭವಾಯಿತು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಮಹೇಂದ್ರನಿಗೆ ಕೇಕ್ ತಿನ್ನಿಸಲು ಜಗತಿ ಮತ್ತು ರಿಷಿ ಇಬ್ಬರೂ ಒಟ್ಟಿಗೆ ಹೋದರು. ಮಹೇಂದ್ರ ಯಾರಿಗೂ ನೋವು ಮಾಡದೇ ಇಬ್ಬರ ಕೇಕ್‌ಅನ್ನು ಒಟ್ಟಿಗೆ ತಿಂದು ಸಂತಸ ಪಟ್ಟ. ಬಳಿಕ ಮಹೇಂದ್ರ ಮಗನಿಗೆ ಕೇಕ್ ತಿನ್ನಿಸಿ ನಂತರ ಜಗತಿಗೂ ತಿನಿಸಿದ. ಕಾರ್ಯಕ್ರಮ ಮುಗಿಸಿ ಅತಿಥಿಗಳು ಹೊರಟರು.

ಮನೆ ಬಿಟ್ಟುಹೋಗಿದ್ದ ಮಹೇಂದ್ರನನ್ನು ಮನೆಯಲ್ಲೇ ಇರುವಂತೆ ರಿಷಿ ಕೇಳಿಕೊಂಡ. ‘ಜೊತೆಗೆ ನಿಮ್ಮ ಪತ್ನಿ ಕೂಡ ಇಲ್ಲೇ ಇರಲಿ’ ಎಂದು ತಂದೆಗೆ ಹೇಳಿದ. ರಿಷಿಯ ಈ ಗಿಫ್ಟ್ ಮನೆಯವರೆಲ್ಲರಿಗೂ ಖುಷಿ ನೀಡಿತು. ತನ್ನ ಮನೆಗೆ ವಾಪಸ್ ಬರಬೇಕೆಂದು ಜಗತಿಗೆ ಆಸೆ ಇದ್ದರೂ ಸಹ ರಿಷಿ ತಾಯಿ ಅಂತ ಒಪ್ಪಿಕೊಳ್ಳದೇ ಹೇಗೆ ಬರುವುದು ಎಂದು ದೊಡ್ಡ ತಲೆನೋವಾಯಿತು. ಇತ್ತ ವಸು ರಾತ್ರಿಯೇ ಯಾರಿಗೂ ಹೇಳದೆ ಮನೆಯಿಂದ ಹೊರಟಳು. ಮನೆಯಿಂದ ಹೊರಬರುತ್ತಿದ್ದಂತೆ ವಸುಧರಾಳನ್ನು ನೋಡಿದ ರಿಷಿ ಇಷ್ಟೊತ್ತಿಗೆ ಎಲ್ಲಿಗೆ ಎಂದು ಕೇಳಿದ. ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ ವಸುಧರಾಳನ್ನು ತಾನೆ ಮನೆವರೆಗೂ ಡ್ರಾಪ್ ಮಾಡಿದ.

ಕಾರಿನಿಂದ ಇಳಿದ ವಸು ರಿಷಿಯನ್ನು ಅಪ್ಪಿಕೊಂಡಳು. ವಸುಧರಾ ನಡೆ ರಿಷಿಗೆ ಅಚ್ಚರಿ ಮೂಡಿಸಿತು. ಏನು ಮಾತನಾಡದೆ ಗುಡ್ ನೈಟ್ ಹೇಳಿ ಹೊರಟಳು. ವಸು ನೆನಪಲ್ಲೇ ಮನೆಗೆ ಬಂದ ರಿಷಿಯನ್ನು ನೋಡಿ ಜಗತಿ ಮಾತನಾಡಬೇಕೆಂದು ತಡೆದು ನಿಲ್ಲಿಸಿದಳು. ‘ಇದು ಕಾಲೇಜು ಅಲ್ಲ ರಿಷಿ ಅಂತನೇ ಕರೆಯುತ್ತೀನಿ’ ಅಂತ ಮಾತು ಪ್ರಾರಂಭಿಸಿದ ಜಗತಿ, ‘ಈ ಮನೆಗೆ ತನ್ನನ್ನು ಯಾಕೆ ಕರ್ಕೊಂಡು ಬಂದಿದ್ದೀಯಾ’ ಎಂದು ಪ್ರಶ್ನೆ ಮಾಡಿದಳು. ಜಗತಿಗೆ ರಿಷಿ ಏನೆಂದು ಹೇಳುತ್ತಾನೆ? ಮಗನ ಮಾತಿನಂತೆ ಗಂಡನ ಮನೆಯಲ್ಲೇ ಉಳಿದುಕೊಳ್ಳುತ್ತಾಳಾ ಜಗತಿ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

TV9 Kannada


Leave a Reply

Your email address will not be published. Required fields are marked *