ಹೊಂಗನಸು: ರಿಷಿ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು; ಜಗತಿ ಸಂತಸಕ್ಕೆ ಕಾರಣವಾಯ್ತು ಮಗನ ನಿರ್ಧಾರ – Honganasu Kannada Serial; College students protest against Rishi


Honganasu Serial Update: ಜಗತಿಯನ್ನು ಡೈರೆಕ್ಟರ್ ಆಗಿ ನೇಮಕ ಮಾಡಿದ್ದರಿಂದ ದೇವಯಾನಿ ಸಿಟ್ಟು ನೆತ್ತಿಗೇರಿತು. ರಿಷಿ ತನ್ನ ಹೆಸರನ್ನು ಹೇಳುತ್ತಾನೆ ಅಂತ ಅಂದುಕೊಂಡಿದ್ದ ದೇವಯಾನಿಗೆ ಜಗತಿಯ ಆಯ್ಕೆ ಶಾಕ್ ನೀಡಿತು.

ಹೊಂಗನಸು: ರಿಷಿ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು; ಜಗತಿ ಸಂತಸಕ್ಕೆ ಕಾರಣವಾಯ್ತು ಮಗನ ನಿರ್ಧಾರ

ಹೊಂಗನಸು ಸೀರಿಯಲ್

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಮಿಷನ್ ಎಜುಕೇಶನ್ ಪ್ರಾಜೆಕ್ಟ್ ರದ್ದು ಮಾಡಿದ ರಿಷಿ ಮೇಲೆ ಮಹೇಂದ್ರನ ಕೋಪ ಮುಂದುವರೆದಿದೆ. ಯಾರು ಎಷ್ಟೇ ಹೇಳಿದರೂ ರಿಷಿ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಇದುವರೆಗೂ ಕೇವಲ ಕುಟುಂಬದೊಳಗೆ ಮಾತ್ರ ಇದ್ದ ಈ ಸಮಸ್ಯೆ ಇದೀಗ ಇಡೀ ಕಾಲೇಜಿಗೆ ಹಬ್ಬಿದೆ. ವಿದ್ಯಾರ್ಥಿಗಳು ರಿಷಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ರಿಷಿ ತಾನು ಮಾಡಿದ್ದೇ ಸರಿ ಎನ್ನುತ್ತಿದ್ದಾನೆ.

ಜಗತಿ ಮೇಲಿನ ಕೋಪಕ್ಕೆ ಎಜುಕೇಶನ್ ಪ್ರಾಜೆಕ್ಟ್‌ ರದ್ದು ಮಾಡಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ ರಿಷಿ. ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಸ್ಟೂಡೆಂಟ್ ಲೀಡರ್ ವಸುಧರಾನೇ ಉತ್ತರ ಕೊಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದ್ದಾರೆ. ಆದರೆ ವಸು ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗದೆ ಸೋತಳು. ಆದರೆ ಇದನ್ನೆಲ್ಲ ಮಾಡಿಸುತ್ತಿರುವುದು ವಸುನೇ ಎಂದು ರಿಷಿ ಆಕೆಯ ಮೇಲೆ ಕೋಪ ಮಾಡಿಕೊಂಡ.

ತನ್ನದೇ ಕಾಲೇಜಿನ ಗಲಾಟೆಯನ್ನು ದೇವಯಾನಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡಿದಳು. ಕಾಲೇಜಿನಲ್ಲಿ ನಡೆಯುತ್ತಿರುವ ಗಲಾಟೆ ವಿಚಾರವನ್ನು ಪತ್ರಕರ್ತರಿಗೆ ತಿಳಿಸಿದಳು. ವಿಷಯ ಗೊತ್ತಾಗುತ್ತಿದ್ದಂತೆ ಪತ್ರಕರ್ತರು ಕಾಲೇಜಿಗೆ ಎಂಟ್ರಿ ಕೊಟ್ಟರು. ಪತ್ರಕರ್ತರು ಬರುತ್ತಿದ್ದಂತೆ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದು ಪರಿಸ್ಥಿತಿ ಕೈ ಮೀರಿ ಹೋಯಿತು. ಇಷ್ಟಾದರೂ ರಿಷಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

ವಿದ್ಯಾರ್ಥಿಗಳ ಗಲಾಟೆ ಜೋರಾಗುತ್ತಿದ್ದಂತೆ ಮಹೇಂದ್ರ ಕೂಡ ಕಾಲೇಜಿಗೆ ಎಂಟ್ರಿ ಕೊಟ್ಟ. ಅಷ್ಟರಲ್ಲೇ ರಿಷಿ ದೊಡ್ಡಪ್ಪ ಕೂಡ ಕಾಲೇಜಿಗೆ ಬಂದ. ಎಲ್ಲರೂ ಸೇರಿ ವಿದ್ಯಾರ್ಥಿಗಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ ಈ ಪ್ರಾಜೆಕ್ಟ್ ನಿಲ್ಲಿಸಿದ್ದೇಕೆ, ಜಗತಿ ಮೇಡಮ್‌ನ ಕಾಲೇಜಿನಿಂದ ಕಿತ್ತಾಕಿದ್ದೇಕೆ ಎಂದು ಪತ್ರಕರ್ತರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು. ಉತ್ತರಿಸಲು ರಿಷಿ ತಡಬಡಾಯಿಸುತ್ತಿದ್ದ. ಅಷ್ಟರಲ್ಲೇ ಜಗತಿ ಎಂಟ್ರಿ ಕೊಟ್ಟಳು. ಪತ್ರಕರ್ತರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸಿ ಅವರ ಬಾಯಿ ಮುಚ್ಚಿಸಿದಳು ಜಗತಿ. 24 ಗಂಟೆಯಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಈಗ ಎಲ್ಲರೂ ತರಗತಿಗೆ ಹೋಗಿ ಎಂದು ವಿದ್ಯಾರ್ಥಿಗಳ ಬಳಿಯೂ ಮನವಿ ಮಾಡಿದಳು. ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಶಾಂತರಾದರು.

24 ಗಂಟೆಯೊಳಗೆ ರಿಷಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಮಹೇಂದ್ರ ಮತ್ತು ಜಗತಿಗೆ ರಿಷಿಯ ನಿರ್ಧಾರದ ಬಗ್ಗೆಯೇ ಯೋಚನೆ. ಇತ್ತ ದೇವಯಾನಿ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತಿದ್ದಾಳೆ. ಮರು ದಿನವೇ ಪತ್ರಿಕಾಗೋಷ್ಠಿ ಕರೆದ ರಿಷಿ. ಕಾಲೇಜು ಆಡಳಿತ ಮಂಡಳಿ, ಸಿಬಂದಿ ವಿದ್ಯಾರ್ಥಿಗಳು ಎಲ್ಲರೂ ಹಾಜರಿದ್ದರು. ಜೊತೆಗೆ ಎಜುಕೇಶನ್ ಮಿನಿಸ್ಟರ್ ಕೂಡ ಹಾಜರಿದ್ದರು. ರಿಷಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದು ಎಲ್ಲರಿಗೂ ಕುತೂಹಲ ಹೆಚ್ಚಾಯಿತು. ಮಿಷನ್ ಎಜುಕೇಶನ್ ಪ್ರಾಜೇಕ್ಟ್ ರದ್ದು ಮಾಡುತ್ತಿದ್ದೀನಿ ಎಂದು ರಿಷಿ ಹೇಳುತ್ತಿದ್ದಂತೆಯೇ ಎಲ್ಲರೂ ಶಾಕ್ ಆದರು. ‘ಆದರೆ ಚಿಕ್ಕ ಮಟ್ಟದಲ್ಲಿರುವ ಈ ಪ್ರಾಜೆಕ್ಟ್ ರದ್ದು ಮಾಡಿ ದೊಡ್ಡದಾಗಿ ಶುರು ಮಾಡಬೇಕೆಂದುಕೊಂಡಿದ್ದೇನೆ, ಹೊಸದಾಗಿ ಪ್ರಾಜೆಕ್ಟ್ ಶುರುವಾಗಲಿದೆ’ ಎಂದು ರಿಷಿ ಹೇಳುತ್ತಿದ್ದಂತೆ ಎಲ್ಲರೂ ಸಂತಸಗೊಂಡರು. ಈ ಪ್ರಾಜೆಕ್ಟ್ ಸರ್ಕಾರದ ಅಡಿಯಲ್ಲಿ ನಡೆಯಲಿ, ಮಹೇಂದ್ರ ಮತ್ತು ಜಗತಿ ಇಬ್ಬರೂ ಡೈರೆಕ್ಟ್ ಆಗಿರುತ್ತಾರೆ ಎಂದು ರಿಷಿ ಘೋಷಿಸಿದ. ರಿಷಿಯ ನಿರ್ಧಾರ ಎಲ್ಲರಿಗೂ ಇಷ್ಟವಾಯಿತು.

ಜಗತಿಯನ್ನು ಡೈರೆಕ್ಟರ್ ಆಗಿ ನೇಮಕ ಮಾಡುತ್ತಿದ್ದ ಹಾಗೆ ದೇವಯಾನಿ ಸಿಟ್ಟು ನೆತ್ತಿಗೇರಿತು. ರಿಷಿ ತನ್ನ ಹೆಸರನ್ನು ಹೇಳುತ್ತಾನೆ ಅಂತ ಅಂದುಕೊಂಡಿದ್ದ ದೇವಯಾನಿಗೆ ಜಗತಿ ಆಯ್ಕೆ ಶಾಕ್ ನೀಡಿತು. ಕೋಪ ಮಾಡಿಕೊಂಡು ದೇವಯಾನಿ ಸಭೆಯಿಂದ ಹೊರನಡೆದಳು. ಪ್ರಾಜೆಕ್ಟ್ ಶುರು ಮಾಡಿದ್ದರಿಂದ ಜಗತಿ ಮತ್ತೆ ಕಾಲೇಜಿಗೆ ಬರುವಂತೆ ಆಗಿದೆ. ಮಹೇಂದ್ರ ಕೂಡ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಾನಾ? ಮನೆಗೆ ವಾಪಾಸ್ ಹೋಗುತ್ತಾನಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

TV9 Kannada


Leave a Reply

Your email address will not be published.