ಹೊಂಡಾ ಗ್ರಾಜಿಯಾ ರೆಪ್ಸೊಲ್ ಮೊಟೊಜಿಪಿ ಎಡಿಶನ್ ಭಾರತದಲ್ಲಿ ಲಾಂಚ್ ಮಾಡಿಡ ಹೊಂಡಾ ಮೋಟಾರ್ಸ್ | Honda Motors launches Honda Grazia Repsol Edition in India, Check details here


ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೊಟೊಜಿಪಿ ಎಡಿಶನ್ ನ ಹೊಂಡಾ ಗ್ರಾಜಿಯಾ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಹೊಂಡಾ ಗ್ರಾಜಿಯಾ 125 ಸಿಸಿ ಸ್ಕೂಟರ್ ಅಧಿಕೃತವಾಗಿ ರೆಪ್ಸೊಲ್ ಹೊಂಡಾ ಟೀಮ್ ಬಣ್ಣಗಳನ್ನು ಪಡೆಯಲಿದೆ. ಹೋಂಡಾದ ವಿವಿಧ ಬೈಕ್‌ಗಳ ಇತರ ರೆಪ್ಸೊಲ್ ಆವೃತ್ತಿಯಂತೆಯೇ, ಗ್ರಾಜಿಯಾ ರೆಪ್ಸೊಲ್ ಸ್ಕೂಟರ್ ಹೊಂಡಾ ರೇಸಿಂಗ್ ತಂಡಕ್ಕೆ ಸಮರ್ಪಿತವಾಗಿದೆ. ಹೊಂಡಾ ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಆವೃತ್ತಿಯ ಎಕ್ಸ್ ಶೋರೂಮ್ ಬೆಲೆ ರೂ 87,138 ಆಗಿದೆ.

ಹೊಂಡಾ ಗ್ರಾಜಿಯಾ ಸ್ಕೂಟರ್​ನ ಬಣ್ಣಗಳ ವಿಷಯ ಮಾತಾಡುವುದಾದರೆ, ಅದರ ಸಿಗ್ನೇಚರ್ ಕಿತ್ತಳೆ ಬಣ್ಣ ಅದರ ದೇಹದ ಎಲ್ಲ ಭಾಗಗಳಲ್ಲಿ ಕಾಣುತ್ತದೆ. ಹೊಸ ಹೊಂಡಾ ಗ್ರಾಜಿಯಾದ ರೆಪ್ಸೊಲ್ ಬ್ಯಾಡ್ಜಿಂಗ್ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೋಚರಿಸುತ್ತದೆ. ಹೋಂಡಾ ರೆಪ್ಸೊಲ್ ಆವೃತ್ತಿಯ ಪರಿಚಯವಿಲ್ಲದವರಿಗೆ, ರೆಪ್ಸೊಲ್ ಆವೃತ್ತಿಯು ಈಗ ಅಸ್ತಿತ್ವದಲ್ಲಿರುವ ಬೈಕ್/ಸ್ಕೂಟರ್‌ ಗಳ ಕಾಸ್ಮೆಟಿಕ್ ಅಪ್‌ಗ್ರೇಡ್ ಆಗಿದೆ.

ಹೊಂಡಾ ಗ್ರಾಜಿಯಾ ಸ್ಕೂಟರ್​ನ ಹೊರಭಾಗದ ಕಡೆ ಸ್ವಲ್ಪ ಗಮನ ಹರಿಸುವ. ಈ ವಾಹನವು ಎಲ್ ಇ ಡಿ ಹೆಡ್ಲ್ಯಾಂಪ್, ವಿಭಜಿತ ಎಲ್ ಇ ಡಿ ಪೊಸಿಶನ್ ಲ್ಯಾಂಪ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಇಂಟಲ್ಲಿಜೆಂಟ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ, 3-ಹಂತದ ಸರಿಹೊಂದಿಸಬಹುದಾದ ಹಿಂಭಾಗದ ಸಸ್ಪೆನ್ಷನ್ ಮತ್ತು ಅನುಕೂಲತೆಗಾಗಿ ಮುಂಭಾಗದ ಸಸ್ಪೆನ್ಷನ್ ಹೊಂದಿದೆ.

ಹೊಂಡಾ ಗ್ರಾಜಿಯಾದ ಮೊಟೊಜಿಪಿ ಟೀಮ್ ಆವೃತ್ತಿಯ ಎಂಜಿನ್ ಅನ್ನು ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉತ್ತಮ ಮೈಲೇಜ್‌ಗಾಗಿ ಎಂಜಿನ್ ಪ್ರೋಗ್ರಾಮ್ಡ್ ಫ್ಯೂಲ್ ಇಂಜೆಕ್ಷನ್ (ಪಿಜಿಎಮ್-ಎಫ್ಐ) ಅನ್ನು ಹೊಂದಿದೆ. ಹೋಂಡಾ ಗ್ರಾಜಿಯಾದ ಇತರ ಕೆಲ ವೈಶಿಷ್ಟ್ಯತೆಗಳೆಂದರೆ ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಮತ್ತು ವರ್ಧಿತ ಸ್ಮಾರ್ಟ್ ಪವರ್. ಎಂಜಿನ್ 8.25 ಪಿಎಸ್ @ 6000 ಆರ್ ಪಿ ಎಮ್ ನ ಗರಿಷ್ಠ ಶಕ್ತಿಯನ್ನು ಮತ್ತು 10.3 ಎನ್ ಎಮ್ @ 5000 ಆರ್ ಪಿ ಎಮ್ ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ:     Smriti Mandhana: ಮಹಿಳಾ ಬಿಗ್ ಬ್ಯಾಷ್​ನಲ್ಲಿ ಸ್ಮೃತಿ ಮಂದಾನ ಆರ್ಭಟ: ದಾಖಲೆಯ ಸ್ಫೋಟಕ ಶತಕ: ವಿಡಿಯೋ

TV9 Kannada


Leave a Reply

Your email address will not be published. Required fields are marked *