ಹೊಟ್ಟೆಯೊಳಗಿನ ಅಂಗಾಂಗಗಳು ಉಲ್ಟಾಪಲ್ಟ; ಅಸಾಧಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ ಕಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು – Hubballi KIMS hospital doctors successfully perform another rare surgery hubballi news in kannada


ಹುಬ್ಬಳ್ಳಿಯ ಕಿಮ್ಸ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಇತ್ತೀಚಿಗೆ ಕೆಲವು ಅಸಾಧಾರಣವಾದ ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆ ಎಲ್ಲರ ಗಮನ ಸೆಳೆದಿತ್ತು. ಇದೀಗ ಮತ್ತೊಮ್ಮೆ ಕಿಮ್ಸ್ ಆ ವೈದ್ಯರು ಮಾಡಿರುವ ಆ ಆಪರೇಶನ್ ಬಗ್ಗೆ ಕೇಳಿದರೆ ನೀವು ನಿಜವಾಗಲೂ ಅಚ್ಚರಿಗೊಳ್ಳುತ್ತೀರಿ.

ಹೊಟ್ಟೆಯೊಳಗಿನ ಅಂಗಾಂಗಗಳು ಉಲ್ಟಾಪಲ್ಟ; ಅಸಾಧಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ ಕಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು

ಹೊಟ್ಟೆಯೊಳಗಿನ ಅಂಗಾಂಗಗಳು ಉಲ್ಟಾಪಲ್ಟ; ಅಸಾಧಾರಣ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ ಕಂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ಅದಿಲ್ಲ, ಇದಿಲ್ಲ, ಅವರು ಸರಿಯಾಗಿ ಪರಿಕ್ಷೇನೂ ಮಾಡಲೇ ಇಲ್ಲ ಎಂಬ ದೂರುಗಳು ಸಾಮಾನ್ಯವಾಗಿದೆ. ಆದರೆ ಯಾವಾಗಲೂ ಹಗರಣ, ಅವ್ಯವಸ್ಥೆಯಿಂದಲೇ ಮನೆಮಾತಾಗಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ (Hubballi KIMS Hospital)ಇದೀಗ ಅಪರೂಪದ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಗಮನಸೆಳೆಯುತ್ತಿದೆ. ಹಲವು ವಿಭಿನ್ನ ಶಸ್ತ್ರ ಚಿಕಿತ್ಸೆಗಳು ಮಾಡುವ ಮೂಲಕ ಖಾಸಗಿ ಆಸ್ಪತ್ರೆಗಲಿಗೆ ಸೆಡ್ಡು ಹೊಡೆಯುತ್ತಿದೆ. ಕಿಮ್ಸ್​ನಲ್ಲಿ ನಡೆದ ಒಂದು ಆಪರೇಶನ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ವ್ಯಕ್ತಿಯೊಬ್ಬರ ಹೊಟ್ಟೆಯೊಳಗಿನ ಹಲವು ಅಂಗಾಂಗಗಳು ಉಲ್ಟಾ ಪಲ್ಟಾ ಆಗಿದ್ದವು. ಬಲ ಭಾಗಕ್ಕೆ ಇರುವಂತವ ಅಂಗಾಂಗಗಳು ಎಡಭಾಗದಲ್ಲಿ ಇದ್ದವು. ಎಡ ಭಾಗದಲ್ಲಿ ಇರುವ ಅಂಗಾಂಗಗಳು ಬಲಭಾಗದಲ್ಲಿ ಇದ್ದವು. ಈ ರೀತಿ ಅಂಗಾಂಗಗಳು ಇರುವುದು ತೀರಾ ಅಪರೂಪವಾಗಿದೆ. ಇಂತಹ ವ್ಯಕ್ತಿಗೆ ಡಾ.ಹೇಬಸುರ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

“ಹೊಟ್ಟೆ ನೋವು ಎಂದು ಹೇಳಿ 36 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿರುವ ಕೆಲವೊಂದು ಅಂಗಾಂಗಗಳು ಆಕಡೆ ಈಕಡೆ ಇದ್ದವು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈ ಶಸ್ತ್ರಚಿಕಿತ್ಸೆಯು ತುಂಬಾ ಸವಾಲಾಗಿತ್ತು.”– ಡಾ.ಹೇಬಸುರ್, ಹಿರಿಯ ಶಸ್ತ್ರ ಚಿಕಿತ್ಸಕರು

ವ್ಯಕ್ತಿಗಳಲ್ಲಿ ಅಂಗಾಂಗಗಳು ಉಲ್ಟಾ ಪಲ್ಟಾ ಕಂಡು ಬರುವುದನ್ನು situs inversus totalis ಎಂದು ಕರೆಯಲಾಗುತ್ತದೆ. ಕಾರವಾರ ಜಿಲ್ಲೆಯ ಮುಂಡಗೊಡದ ಹಜಾರಿ ಎನ್ನುವ ಈ ವ್ಯಕ್ತಿಯ ಹೊಟ್ಟೆಯಲ್ಲಿ ಎಲ್ಲಾ ಅಂಗಾಂಗ ಉಲ್ಟಾ ಪಲ್ಟಾ ಆಗಿದ್ದವು. ಹುಟ್ಟಿನಿಂದಲೇ ಈ ವ್ಯಕ್ತಿಗೆ ಅಬ್ ಡೋಮಿನಲ್ ಆರ್ಗಾನ್ ಸಾಮಾನ್ಯ ವ್ಯಕ್ತಿಗಳ ಹಾಗೆ ಇರಲಿಲ್ಲ. ಹಜಾರಿಗೆ ಹೃದಯ ಕೂಡ ಬಲ ಭಾಗಕ್ಕೆ ಇತ್ತು. ಇಂತಹ ವ್ಯಕ್ತಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಕಿಮ್ಸ್ ಇತಿಹಾಸದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡಿಯೇ ಇರಲಿಲ್ಲ. ಅಲ್ಲದೆ ಉತ್ತರ ಕರ್ನಾಟಕದ ಭಾಗದ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಸವಾಲಿನ ಶಸ್ತ್ರ ಚಿಕಿತ್ಸೆ ಆಗಿರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ತಾನು ಹುಷಾರಾಗಿ ಇದ್ದಾನೆ. ಕಿಮ್ಸ್ ವೈದ್ಯರು ತನಗೆ ಪುನರ್ಜನ್ಮ ನೀಡಿದ್ದಾರೆ ಎಂದು ಹಜಾರಿ ಹೇಳಿದ್ದಾರೆ.

ಲ್ಯಾಪ್ರೋ ಸ್ಪೋಪಿಕ್ ಮೂಲಕ ಈ ಶಸ್ತ್ರ ಚಿಕಿತ್ಸೆ ಡಾಕ್ಟರ್ ಹೇಬಸೂರು ನೇತೃತ್ವದ ವೈದ್ಯರ ಟೀಮ್ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಇಂತಹ ಸವಾಲಿನ ಆಪರೇಶನ್ ಮಾಡಲು ಹಿಂಜರಿಯುವುದೇ ಹೆಚ್ಚು. ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಅಂತಹ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಈಗ ಹಜಾರಿಯ ಹೊಟ್ಟೆ ಒಳಗೆ ಎಲ್ಲಾ ಅಂಗಾಂಗ ಇರಬೇಕಾದ ಜಾಗದಲ್ಲಿ ಕಸಿ ಮಾಡಲಾಗಿದೆ.

ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *