ಬೆಂಗಳೂರು: ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಕುರಿತು ನ್ಯೂಸ್​ ಫಸ್ಟ್​ಗೆ ಮಾತನಾಡಿದ ತಾಂತ್ರಿಕ ಸಲಹಾ ಸಮಿತಿ ಸದಸ್ಯ.. ಡಾ. ರವಿ.. ಮೊದಲ ಅಲೆಯಲ್ಲಿ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಮೈ ಕೈ ನೋವು ಇಂಥದ್ದನ್ನು ನೋಡುತ್ತಾ ಬಂದ್ವಿ. ಆ ಮೇಲೆ ವಾಸನೆ ಹೊರಟು ಹೋಗೋದು, ರುಚಿ ಗೊತ್ತಾಗದಿರುವುದು ಇಂಥವು ಕಂಡುಬಂದ್ವು. ಇನ್ನೂ ಕೆಲವು ತಿಂಗಳಾದ ಮೇಲೆ ಹೊಟ್ಟೆ ನೋವು ಭೇದಿಯಾಗೋದು ಶುರುವಾಯ್ತು.

ಈ ನಡುವೆ ವಿಪರೀತ ಸುಸ್ತು ಕಾಣಿಸಿಕೊಳ್ತಾ ಇದೆ. ಸುಸ್ತಾದವರಲ್ಲಿ ಕೊರೊನಾ ಪಾಸಿಟಿವ್ ಬರ್ತಾ ಇದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಜ್ವರ ಬರುತ್ತೆ ಅಥವಾ ಹೊಟ್ಟೆ ಕೆಡುತ್ತೆ. ಹೀಗಾಗಿ ಹೊಟ್ಟೆ ಕೆಟ್ಟರೂ ಸಹ ಜನರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ.

The post ಹೊಟ್ಟೆ ಕೆಟ್ಟರೂ ಸಹ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ- ಡಾ. ರವಿ ಸಲಹೆ appeared first on News First Kannada.

Source: newsfirstlive.com

Source link