ಮೈಸೂರು: ನಗರದಲ್ಲಿ ಗರ್ಭಿಣಿ ಮತ್ತು ಪೊಲೀಸರ ನಡುವೆ ಭಾರೀ ವಾಗ್ವಾದ ಏರ್ಪಟ್ಟ ಘಟನೆ ನಡೆದಿದೆ. ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗರ್ಭಿಣಿ ಮತ್ತು ಸಂಬಂಧಿಯೊಡನೆ ಗಾಡಿಯಲ್ಲಿ ಬಂದಿದ್ದಾರೆ. ವಾಹನ ಪರಿಶೀಲಿಸುತ್ತಿದ್ದ ಪೊಲೀಸರು ಮತ್ತು ಗರ್ಭಿಣಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

ಈ ವೇಳೆ ನಾನು ಗರ್ಭಿಣಿ, ನನಗೆ ಹೊಟ್ಟೆ ನೋವಿದೆ.. ಆಸ್ಪತ್ರೆಗೆ ಹೋಗಬೇಕಿದೆ ಅಂತ ಕೇಳಿಕೊಂಡ್ರೂ.. ಇದಕ್ಕೆ ವಿರೋಧವಾಗಿ ಪೊಲೀಸರು ಮಾತನಾಡಿದ್ರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಹಿಳೆ ಲೇಡಿ ಪೊಲೀಸ್‌ ವಿರುದ್ಧ ಕಿರುಚಾಡಿದ್ದಾರೆ. ನಾನು ಗರ್ಭಿಣಿ ಇದ್ದೀನಿ, ಆಸ್ಪತ್ರೆಗೆ ಹೋಗಬೇಕು ಅಂದ್ರೂ ಕೇಳುತ್ತಿಲ್ಲವಲ್ಲ ನೀವು ಅಂತ ಹೇಳಿ ಪೊಲೀಸರ ವಿರುದ್ಧ ಸಖತ್‌ ಗರಂ ಆಗಿದ್ದಾರೆ. ಇನ್ನು ಲೇಡಿ ಪೊಲೀಸ್‌ ಮತ್ತು ಗರ್ಭಿಣಿಯ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಪೊಲೀಸರ ವರ್ತನೆಯಿಂದ ಬೇಸರಗೊಂಡ ಗರ್ಭಿಣಿ ಕಣ್ಣೀರಿಡುತ್ತಾ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ.

The post ‘ಹೊಟ್ಟೆ ನೋವಿದೆ, ಆಸ್ಪತ್ರೆಗೆ ಹೋಗಲು ಬಿಡಿ’ ಗೋಳಾಡಿದ್ರೂ ಗರ್ಭಿಣಿಯನ್ನು ಬಿಡದ ಪೊಲೀಸರು appeared first on News First Kannada.

Source: newsfirstlive.com

Source link