ಹೊತ್ತಿ ಉರಿಯುತ್ತಿದೆ ಪೆಟ್ರೋಲ್​ ದರ- ಸತತ 6ನೇ ದಿನವೂ ಜೇಬಿಗೆ ಬೆಂಕಿ ಇಟ್ಟ ಸರ್ಕಾರ

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್​​ ದರ ಸತತ 6ನೇ ದಿನವೂ ಹೆಚ್ಚಳವಾಗಿದ್ದು, ವಿವಿಧ ರಾಜ್ಯದಗಳಲ್ಲಿ ಡಿಸೇಲ್​ ದರವೇ 100 ರೂಪಾಯಿ ಗಡಿದಾಟಿದೆ. ಹೀಗಾಗಿ ಸವಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪ್ರತಿ ಲೀಟರ್​​ ಪೆಟ್ರೋಲ್​​​ ಮೇಲೆ 30 ಪೈಸೆ, ಪ್ರತಿ ಲೀಟರ್ ಡಿಸೇಲ್​ ಬೆಲೆಯಲ್ಲಿ 35 ಪೈಸೆ ದರ ಹೆಚ್ಚಳವಾಗಿದೆ. ಭಾರತದ ಮೆಟ್ರೋ ಸಿಟಿಗಳಲ್ಲಿ ಮುಂಬೈನಲ್ಲಿ ಪೆಟ್ರೋಲ್​ ಅತಿ ಎಂದರೇ 110.12 ರೂಪಾಯಿಗೆ ಪೆಟ್ರೋಲ್​​​ ಮಾರಾಟ ಮಾಡಲಾಗುತ್ತಿದ್ದು, ಡಿಸೇಲ್​​ 100.66 ರೂಪಾಯಿಯೊಂದಿಗೆ ಶತಕ ದಾಟಿದೆ.

ಇನ್ನು ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​​ ಬೆಲೆ 104.14 ರೂಪಾಯಿ, ಡಿಸೇಲ್​​ 92.82 ರೂಪಾಯಿ ಇದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್​​ 107.77 ರೂಪಾಯಿ, ಡಿಸೇಲ್​ 98.52 ರೂಪಾಯಿಗೆ ಹೆಚ್ಚಳವಾಗಿದೆ.

ಯಾವ ನಗರದಲ್ಲಿ ಲೀಟರ್​​ ಬೆಲೆ ಎಷ್ಟಿದೆ…?

  • ಬೆಂಗಳೂರು: ಪೆಟ್ರೋಲ್-107.77 ರೂ – ಡೀಸೆಲ್ – 98.52 ರೂ.
  • ದೆಹಲಿ: ಪೆಟ್ರೋಲ್- 107.46 ರೂ – ಡೀಸೆಲ್- 98.15 ರೂ.
  • ಮುಂಬೈ: ಪೆಟ್ರೋಲ್-110.12 ರೂ- ಡೀಸೆಲ್-100.66 ರೂ.
  • ಚೆನ್ನೈ: ಪೆಟ್ರೋಲ್ -101.53 ರೂ- ಡೀಸೆಲ್ -97.26 ರೂ.
  • ಹೈದರಾಬಾದ್: ಪೆಟ್ರೋಲ್ -108.33 ರೂ- ಡೀಸೆಲ್-101.27 ರೂ.

News First Live Kannada

Leave a comment

Your email address will not be published. Required fields are marked *