ಚಾಮರಾಜನಗರ: ಹೊರಗೆ ಬರಬೇಡಿ.. ಕೊರೊನಾ ಹರಡುತ್ತೆ ಅಂತಾ ಹೇಳ್ತಾನೇ ಬರ್ತಿದೀವಿ. ಆದ್ರೆ, ಇಲ್ನೋಡಿ ವಿಪರ್ಯಾಸ. ಇದೊಂದು ಆಶ್ರಮದ ಮಕ್ಕಳು ಹೊರಗಡೆನೇ ಬಂದಿಲ್ಲ. ಆದ್ರೂ ಕೊರೊನಾ ಬಂದಿದೆ. ಇದೀಗ ಈ ಆಶ್ರಮವನ್ನೇ ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ದೀನಬಂಧು ಆಶ್ರಮ. ಚಾಮರಾಜನಗರ ಪಟ್ಟಣದಲ್ಲಿರುವ ಇದೇ ಆಶ್ರಮದ ಮಕ್ಕಳು ಈಗ ಆತಂಕಕ್ಕೆ ಸಿಲುಕಿದ್ದಾರೆ. ಹೊರಗಡೆಯೂ ಹೋಗಿಲ್ಲ, ಎಲ್ಲೂ ಸುತ್ತಾಡಿಲ್ಲ. ಆದ್ರೆ ಕಾಡ್ತಿರುವ ಕೊರೊನಾದಿಂದ ಮಕ್ಕಳು ಕಂಗಾಲಾಗಿ ಹೋಗಿದ್ದಾರೆ.

ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪರವರ ಪುತ್ರ ಜಿ.ಎಸ್.ಜಯದೇವ್‌ ಅವ್ರು ಚಾಮರಾಜನಗರ ಪಟ್ಟಣದಲ್ಲಿ ದೀನಬಂಧು ಆಶ್ರಮ ನಡೆಸುತ್ತಿದ್ದಾರೆ.‌ ಈ‌ ಆಶ್ರಮದಲ್ಲಿ 70 ಮಕ್ಕಳಿದ್ದು, 8 ವರ್ಷದಿಂದ 16 ವರ್ಷದ ವಯೋಮಾನದವರಿದ್ದಾರೆ. ಕೊರೊನಾ ಕೇಸಸ್‌ ಬರ್ತಿರೋದ್ರಿಂದ ಇಲ್ಲಿನ ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಲಾಗಿದೆ. ಆದ್ರೆ 70 ಮಕ್ಕಳಲ್ಲಿ 31 ಮಕ್ಕಳಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಶಾಲೆ ಬಂದ್‌ ಆಗಿದ್ದರಿಂದ 70 ಮಕ್ಕಳು ಆಶ್ರಮದಲ್ಲೇ ವಾಸಿಸುತ್ತಿದ್ದಾರೆ. ಕೋವಿಡ್‌ ಪಾಸಿಟಿವ್‌ ಬಂದಿರೋದ್ರಿಂದ ಮಕ್ಕಳಲ್ಲಿ ಭಯ ಉಂಟಾಗಿದೆ. ಖುದ್ದು ಚಾಮರಾಜನಗರ ತಹಶೀಲ್ದಾರ್‌ ಗುರುಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿದ್ದು, ಕಂಟೈನ್ಮೇಂಟ್ ಝೋನ್‌ ಆಗಿ ಘೋಷಣೆ ‌ಮಾಡಿದ್ದಾರೆ. ಪಾಸಿಟಿವ್‌ ಧೃಢಪಟ್ಟ ಮಕ್ಕಳನ್ನ ಆಶ್ರಮದಿಂದ ದೀನಬಂಧು ಶಾಲೆಗೆ ಶಿಫ್ಟ್‌ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಸೋಂಕು ಲಕ್ಷಣ ರಹಿತರಾಗಿದ್ದ ಮಕ್ಕಳಿಗೆ ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಕ್ಕಳು ಆಶ್ರಮದಿಂದ ಹೊರಗಡೆ ಹೋಗದಿದ್ದರೂ ಹೇಗೆ ಕೊರೊನಾ ಬಂತು ಅನ್ನೋ ವಿಚಾರ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಅಲ್ಲಿನ ಸಿಬ್ಬಂದಿಯಿಂದ ಕೊರೊನಾ ಹರಡಿರಬಹುದು ಅಂತಾ ಶಂಕಿಸಲಾಗಿದೆ.

ಹೋಮ್‌ ಐಸೋಲೇಷನ್‌ನಲ್ಲಿರುವ ಕೆಲ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅದಕ್ಕಾಗಿ ಸಂಸ್ಥೆಯಿಂದಲೇ ನರ್ಸ್‌ಗಳನ್ನು ನೇಮಿಸಲಾಗಿದೆ. ಇಷ್ಟು ದಿನ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಕೊರೊನಾ ಮಹಾಮಾರಿ ಇದೀಗ ಪುಟ್ಟ ಮಕ್ಕಳಿಗೂ ವಕ್ಕರಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಅದ್ರಲ್ಲೂ ಯಾರ ಸಂಪರ್ಕಕ್ಕೂ ಸಿಗದ ಮಕ್ಕಳಿಗೂ ಈಗ ಪಾಸಿಟಿವ್‌ ಬಂದಿದ್ದು, ಮತ್ತಷ್ಟು ಭೀತಿ ತಂದಿದೆ.

The post ಹೊರಗೆ ಕಾಲೇ ಇಟ್ಟಿಲ್ಲ.. ಆದರೂ ಬಂದುಬಿಡ್ತು ಕೊರೊನಾ: 31 ಮಕ್ಕಳಿಗೆ ಪಾಸಿಟಿವ್ appeared first on News First Kannada.

Source: newsfirstlive.com

Source link