ಹೊಳೆಯುವ ಆಕ್ಟೋಪಸ್​ ಪತ್ತೆ.. ಏನಿದರ ಸ್ಪೆಷಲ್..?


ಆಸ್ಟ್ರೇಲಿಯಾದ ಜೀವಶಾಸ್ತ್ರಜ್ಞರು ಬರೋಬ್ಬರಿ 20 ವರ್ಷಗಳ ಬಳಿಕ ಬಂಗಾರದ ಬಣ್ಣದಲ್ಲಿ ಹೊಳೆಯುವ ಅಪರೂಪದ ಬ್ಲಾಂಕೆಟ್​ ಆಕ್ಟೋಪಸ್​ ಪತ್ತೆ ಮಾಡಿದ್ದಾರೆ. ಗ್ರೇಟ್​ ಬ್ಯಾರಿಯರ್​ನ ಲೇಡಿ ಐಸ್​ಲ್ಯಾಂಡ್​​ನಲ್ಲಿ ಈ ಅಪರೂಪದ ಜೀವಿ ಕಂಡುಬಂದಿದೆ.

ಆಸ್ಟ್ರೇಲಿಯಾದ ಜೆಸಿಂತಾ ಶಾಕ್ವಲನ್​ ಎಂಬ ಸಮುದ್ರ ಜೀವಶಾಸ್ತ್ರಜ್ಞೆ ಈ ಅಪರೂಪದ ಜೀವಿಯ ವಿಡಿಯೋವನ್ನು ತಮ್ಮ ಇನ್​ ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅಪರೂಪಕ್ಕೆ ಕಾಣಸಿಗುವ ಈ ಆಕ್ಟೋಪಸ್​, ಆರು ಅಡಿಗಳವರೆಗೆ ಬೆಳೆಯುವ ಸಾಮರ್ಥ್ಯ ಹೊಂದಿದ್ದು, ಹೆಣ್ಣು ಆಕ್ಟೋಪಸ್​ಗಳು, ಗಂಡು ಆಕ್ಟೋಪಸ್​ಗಿಂತ 40 ಸಾವಿರ ಪಟ್ಟು ಹೆಚ್ಚು ತೂಕವಿರುತ್ತದೆ ಅಂತಾ ಹೇಳಲಾಗುತ್ತದೆ.

News First Live Kannada


Leave a Reply

Your email address will not be published. Required fields are marked *