ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದೇ ಕಾಲಿನಲ್ಲಿ 9 ಬೆರಳವುಳ್ಳ ಗಂಡು ಮಗು ಜನಿಸಿದೆ. ಹೊಸಪೇಟೆ ಮೂಲದ ಮಹಿಳೆಗೆ ಇಂದು ಜನಿಸಿದ ಮಗುವಿನ ಬಲಗಾಲಿನಲ್ಲಿ ಒಂಬತ್ತು ಬೆರಳುಗಳಿದ್ದು ಅಚ್ಚರಿಗೆ ಕಾರಣವಾಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಎಡಗಾಲಿನಲ್ಲಿ ಸಾಮಾನ್ಯವಾಗಿ ಐದು ಬೆರಳುಗಳಿದ್ದು ಎಡಗಾಲಿಗೆ ಮಾತ್ರ ಒಂಬತ್ತು ಬೆರಳುಗಳಿವೆ. ಆದರೆ ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಲಾಗಿದೆ. ತಾಯಿ ಹೊಸಪೇಟೆ ತಾಲೂಕಿನ ನಿವಾಸಿಗಳಾಗಿದ್ದಾರೆ. ಆದರೆ ತಾಯಿ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.

ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳು ಜನಿಸುವುದು ತುಂಬಾ ಅಪರೂಪ. ಒಂಬತ್ತು ಬೆರಳುವುಳ್ಳ ಮಗು ಜನ್ಮತಾಳುವುದು ತೀರಾ ಕಡಿಮೆ. ಅಲ್ಲದೇ ಬೆರಳು ಇರುವುದು ಮುಂಚಿತವಾಗಿ ತಿಳಿಯುವುದಿಲ್ಲ. ಜನನವಾದ ಬಳಿಕ ಅದು ತಿಳಿಯಲಿದೆ ಎನ್ನುತ್ತಾರೆ ವೈದ್ಯರು.

The post ಹೊಸಪೇಟೆಯಲ್ಲಿ ಅಪರೂಪದ ಮಗು ಜನನ appeared first on Public TV.

Source: publictv.in

Source link