ಹೊಸಪೇಟೆಯಲ್ಲಿ ಪುನೀತ್ ಅಭಿಮಾನಿಗಳಿಂದ 7.4 ಅಡಿ ಎತ್ತರದ ಪುತ್ಥಳಿ ಅನಾವರಣ; ನೆಲಮುಟ್ಟಿ ನಮಸ್ಕರಿಸಿದ ರಾಘವೇಂದ್ರ ರಾಜಕುಮಾರ್ | Puneeth rajkumar statue inaugurated in hospet vijayanagar


ಹೊಸಪೇಟೆಯಲ್ಲಿ ಪುನೀತ್ ಅಭಿಮಾನಿಗಳಿಂದ 7.4 ಅಡಿ ಎತ್ತರದ ಪುತ್ಥಳಿ ಅನಾವರಣ; ನೆಲಮುಟ್ಟಿ ನಮಸ್ಕರಿಸಿದ ರಾಘವೇಂದ್ರ ರಾಜಕುಮಾರ್

ಪುನೀತ್ ಅಭಿಮಾನಿಗಳಿಂದ 7.4 ಅಡಿ ಎತ್ತರದ ಪುತ್ಥಳಿ ಅನಾವರಣ

7.4 ಅಡಿ ಎತ್ತರದ ಅಪ್ಪು ಪುತ್ಥಳಿಯನ್ನು ಆಂಧ್ರಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ರೂಪಿಸಿ, 5 ತಿಂಗಳ ಹಿಂದೆಯೇ ನಗರಕ್ಕೆ ತರಲಾಗಿದೆ ಒಟ್ಟು 6.4 ಲಕ್ಷ ರೂಪಾಯಿ ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗಿದೆ.

ವಿಜಯನಗರ: ಯಾರೇ ಕೈ ಬಿಟ್ಟರೂ ಹೊಸಪೇಟೆ ಜನ ನಮ್ಮನ್ನೆಂದೂ ಬಿಡಲ್ಲ’ ಎಂದು ಅಭಿಮಾನಿಗಳ ಪ್ರೀತಿಯನ್ನು ನೆನೆಯುತ್ತಿದ್ದ ದಿವಂಗತ ನಟ ಪುನೀತ್ ರಾಜ್ ಕುಮಾರ್‌ ಅವರ ಕಂಚಿನ ಪುತ್ಥಳಿ ಅನಾವರಣಗೊಂಡಿದೆ. ಪುನೀತ ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ರಾಜ್ ಕುಟುಂಬವೇ ಸಾಕ್ಷಿಯಾಗಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್, ಅವರ ಪತ್ನಿ ಮಂಗಳಾ, ನಿರ್ದೇಶಕ ಸಂತೋಷ ಆನಂದರಾಮ, ಗುರುಕಿರಣ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಹೊಸಪೇಟೆಯ ಬಗ್ಗೆ ವಿಶೇಷ ಪ್ರೀತಿ ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಅಪ್ಪುವಿನ ಕಂಚಿನ ಪುತ್ಥಳಿಯನ್ನು ನಗರದ ತಾಲೂಕು ಕಚೇರಿ ಸಮೀಪದಲ್ಲಿ ಅವರದೇ ಹೆಸರಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಸ್ಥಾಪಿಸಿರುವುದು ವಿಶೇಷವಾಗಿದೆ.

TV9 Kannada


Leave a Reply

Your email address will not be published.