ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್ ಮೂಲಕ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಹೌದು. ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹೊಸಪೇಟೆಯ (Hospet) ಅಭಿಮಾನಿಗಳು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಯಾತ್ರೆ ಕೈಗೊಂಡಿದ್ದಾರೆ. ಹೊಸಪೇಟೆಯ 13 ಯುವಕರು ‘ಪುನೀತ್ ರಾಜ್ಕುಮಾರ್ ಸರ್ಕಲ್’ನಿಂದ ಪ್ರಯಾಣ ಆರಂಭಿಸಿದ್ದಾರೆ. ಪುನೀತ್ ಮೇಲಿನ ಅಭಿಮಾನ ಹಾಗೂ ಪ್ರೇಮಕ್ಕೆ ಅವರು ಯಾತ್ರೆ ಕೈಗೊಂಡಿದ್ದಾರೆ. ಸ್ಥಳೀಯರು ಯುವಕರ ಪ್ರಯಾಣಕ್ಕೆ ಆಗಮಿಸಿ ಶುಭಕೋರಿದ್ದಾರೆ.