ವಿಜಯನಗರ: ಹೊಸಪೇಟೆಯ ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ಇಡುವಂತೆ ಅಪ್ಪು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ಗೆ ಪತ್ರ ಸಲ್ಲಿಸಿ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಇದರ ಜೊತೆಗೆ ಉದ್ಯಾನವನ, ಕಲಾ ಮಂದಿರಕ್ಕೂ ಪುನೀತ್ ರಾಜ್‍ಕುಮಾರ್ ಹೆಸರನ್ನು ನಾಮಕರಣ ಮಾಡಿ ಅಂತಾ ಆನಂದ್ ಸಿಂಗ್ ಬಳಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನಂದ ಸಿಂಗ್ ಸದ್ಯ ಜನವರಿಗೆ ಒಂದು ಸರ್ಕಲ್ಗೆ ಪುನಿತ್ ಹೆಸರನ್ನು ನಾಮಕರಣ ಮಾಡುತ್ತೇವೆ. ಅಲ್ಲದೆ ಕಲಾ ಮಂದಿರಕ್ಕೂ ಸಹ ಅಪ್ಪು ಹೆಸರು ನಾಮಕರಣ ಮಾಡ್ತೇವೆ ಅಂತಾ ಆನಂದ್ ಸಿಂಗ್ ಭರವಸೆ ಕೊಟ್ಟಿದ್ದಾರೆ.