ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಸಮಗ್ರ ನೀರಾವರಿಯ ಕನಸು ನನಸಾಗುವತ್ತ ಸಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಟ್ವೀಟ್​ ಮಾಡಿದ್ದಾರೆ. ತಾಲ್ಲೂಕಿನ ಅಂಜಾನಪುರ ಹೋಬಳಿಯ ಕೆರೆ ತುಂಬಿಸುವ ಮತ್ತು ಕುಡಿಯುವ ನೀರಿನ ಯೋಜನೆಯಾದ ಹೊಸಳ್ಳಿ ಏತ ನೀರಾವರಿ ಯೋಜನೆಯು ಸಂಪೂರ್ಣದತ್ತ ಸಾಗಿದೆ. ನಿನ್ನೆ ರಾತ್ರಿ ಪರೀಕ್ಷಾರ್ಥ ನೀರು ಬಿಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು, ಮತ್ತೊಂದು ಟ್ವೀಟ್​​​ನಲ್ಲಿ ಹೊಸಳ್ಳಿ ಏತ ನೀರಾವರಿ ಕನಸು ನನಸಾಗಲು ಸಹಕರಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಹೊಸಳ್ಳಿ ಏತ ನೀರಾವರಿ ಯೋಜನೆ ಮೂಲಕ ಅಂಜನಾಪುರ ಜಲಾಯಶಕ್ಕೆ ನೀರು ಹರಿಸಲಾಗುತ್ತದೆ. 250 ಕೋಟಿಯ ಈ ಯೋಜನೆಯಿಂದ ಶಿಕಾರಿಪುರದ 18 ಗ್ರಾಮಗಳು, ಶಿವಮೊಗ್ಗ 32 ಹಳ್ಳಿಗಳಿಗೆ ಉಪಯೋಗವಾಗುತ್ತಿದೆ.

The post ಹೊಸಳ್ಳಿ ಏತ ನೀರಾವರಿ ಯೋಜನೆ ಕನಸು ನನಸು; ಬಿಎಸ್​​ವೈಗೆ ಪುತ್ರ ಬಿವೈ ರಾಘವೇಂದ್ರ ಅಭಿನಂದನೆ appeared first on News First Kannada.

Source: newsfirstlive.com

Source link