ಹೊಸ ಅಧ್ಯಾಯಕ್ಕೆ ಹೊರಳಿದ ನಾಗಿಣಿ-2.. ಪಟ್​.. ಪಟ್.. ಪಟಾಕಾ ಅವತಾರ ತಾಳಿದ ಶಿವಾನಿ..!


ನಾಗಿಣಿ ಪ್ರಪಂಚದಲ್ಲಿ ಹೊಸ ಅಧ್ಯಾಯ ಶುರುವಾಗ್ತಿದೆ ಎಂಬ ಮಾಹಿತಿ ನೀಡಿದ್ವಿ. ಹೊಸ ಕತೆಯಲ್ಲಿ ನಮ್ರತಾ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅವ್ರ ಲುಕ್​ ಸಖತ್​ ಸೌಂಡ್​ ಮಾಡುತ್ತಿದ್ದು, ಮಾಡರ್ನ್​​​ ಬೆಡಗಿ ನಾಟಕದ ಚೋಕರಿಯಾಗಿ ತೆರೆಮೇಲೆ ಬರ್ತಿದ್ದಾಳೆ.

ತುಂಬಾನೇ ಮುಖ್ಯವಾದ ಸಮಾಚಾರವನ್ನ ತಂದಿದ್ದಿವಿ. ಅದೇನೂ ಅಂತಾ ಹೇಳೋ ಮೊದಲು ಸದ್ಯ ನಾಗಿಣಿಯಲ್ಲಿ ಏನ್​ ನಡೀತಿದೆ ಅಂತಾ ಒಂದ್​ ಸಾರಿ ಹೇಳ್​ ಬಿಡ್ತಿವಿ ಕೇಳಿ. ಮಂತ್ರವಾದಿ ತಕ್ಷಕ ನಾಗಮಣಿಯನ್ನ ತನ್ನ ವಶಕ್ಕೆ ಪಡೆದುಕೊಳ್ಳಲು ಶಿವಾನಿಯ ದೇಹದಿಂದ ಆತ್ಮವನ್ನ ಬೇರ್ಪಡಿಸಿ, ಅವಳ ದೇಹವನ್ನ ಸುಟ್ಟು ಹಾಕಿದ್ದಾನೆ. ಶಿವಾನಿ ಆತ್ಮ ಸದ್ಯ ಅತಂತ್ರದ ಸ್ಥಿತಿಯಲ್ಲಿದೆ.

ಇನ್ನು ಶಿವಾನಿಯನ್ನ ಕಳೆದುಕೊಂಡಿರುವ ತ್ರಿಶೂಲ್​ ಆತ್ಮಹತ್ಯೆ ಮಾಡಿಕೊಳ್ಳೊಕೆ ನಿರ್ಧರಿಸುತ್ತಾನೆ. ಆಗ ಅಘೋರಿ ಬಾಬಾ ಬಂದು ಶಿವಾನಿಯ ಆತ್ಮ ದರ್ಶನ ಮಾಡಿಸಿ ಮುಂದೇ ಏನ್​ ಮಾಡ್ಬೇಕು..? ಬದುಕಿನ ತಿರುವುಗಳ ಬಗ್ಗೆ ಸಣ್ಣ ಕ್ಲೂ ಕೊಡ್ತಾನೆ. ಇದು ತ್ರಿಶೂಲ್​ ಜೀವನದಲ್ಲಿ ಆಶಾಕಿರಣ ಮೂಡಿಸುತ್ತದೆ. ಇದಿಷ್ಟು ಸದ್ಯದ ನಾಗಿಣಿ ಕತೆ. ಅಂದ್ಹಾಗೆ, ಶಿವಾನಿ ನಾಟಕದ ಕಂಪನಿಯಲ್ಲಿ ಕೆಲಸ ಮಾಡ್ತಿರ್ತಾಳೆ. ಶಿವಾನಿಯದ್ದು ಕಂಪ್ಲೀಟ್​ ಹೊಸ ಫ್ಯಾಮಿಲಿನೇ ಬರ್ತಿದೆ. ಶಿವಾನಿ ಯಾಕ್​ ಅಲ್ಲಿ ಇರ್ತಾಳೆ..? ಈ ಹೊಸ ಕುಟುಂಬ ಯಾವ್ದು..? ಶಿವಾನಿ ಬದಿಕಿದ್ದಾಳ..? ಅಥವಾ ಬೇರೆ ಏನ್​ ಕತೆ ಅನ್ನೋದನ್ನ ತಿಳಿಯಲೂ ನೀವ್​ ಮುಂದಿನ ಸಂಚಿಕೆ ವರೆಗೂ ಕಾಯ್ಲೇಬೇಕು.

ಇನ್ನೂ ಹೊಸ ಫ್ಯಾಮಿಲಿಯಲ್ಲಿ ಯಾರ್​ ಇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ, ತಿಥಿ ಖ್ಯಾತಿಯ ಸೆಂಚುರಿ ಗೌಡ, ಗಡ್ಡಪ್ಪ, ಡ್ರಾಮಾ ಜೂನಿಯರ್ಸ್​ನ ಮಹೇಂದ್ರ, ಹೊಸ ಪ್ರತಿಭೆ ರಿದ್ಧಿ ಅಶೋಕ್​ ಹೀಗೆ ದೊಡ್ಡ ತಾರಾಬಳಗವೇ ಬರುತ್ತಿದೆ.

ಈಗಾಗಲೇ ಚಿತ್ರಿಕರಣ ಭರದಿಂದ ಸಾಗಿದ್ದು, ಶ್ರೀರಂಗಪಟ್ಟಣದ ಹಳ್ಳಿ ಸೊಗಡಿನಲ್ಲಿ ಸನ್ನಿವೇಶಗಳನ್ನ ಸೆರೆಹಿಡಿಯಲಾಗುತ್ತಿದೆ. ಹೊಸ ಅಧ್ಯಾಯ ಸಾಕಷ್ಟು ಕೌತುಕದಿಂದ ಕೂಡಿದೆ. ಶೈಲೂ ಅನ್ನೋ ಹೊಸ ಕ್ಯಾರೆಕ್ಟರ್​ ಸೃಷ್ಟಿಯಾಗಿದ್ದು, ನಮ್ರತಾ ಏಕ್​ದಮ್ ಪಟಾಕಾ ರೋಲ್​ನಲ್ಲಿ ಕಾಣಿಸುತ್ತಿದ್ದಾರೆ. ಹೊಸ ಅನುವಭವ ಕಟ್ಟಿಕೊಡಲು ಸಜ್ಜಾಗಿದೆ ನಾಗಿಣಿ 2 ಟೀಮ್​.

 

News First Live Kannada


Leave a Reply

Your email address will not be published.