ನವದೆಹಲಿ: ಬಾಹ್ಯಾಕಾಶಕ್ಕೆ ಟೂರ್ ಹೋಗಿಬರುವುದು ಇಲ್ಲಿಯವರೆಗೆ ಕನಸಾಗಿಯಷ್ಟೇ ಉಳಿದಿತ್ತು. ಆದ್ರೆ ಇಂದು ಈ ಕನಸನ್ನ ಬ್ರಿಟನ್​ನ ಖ್ಯಾತ ಉದ್ಯಮಿ ರಿಚರ್ಡ್ ಬ್ರಾನ್ಸನ್ ನಿಜವಾಗಿಸಿದ್ದಾರೆ. ತಮ್ಮ ಒಡೆತನದ ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್ ಫ್ಲೈಟ್ ಕಂಪನಿಯಿಂದ ತಯಾರಿಸಲ್ಪಟ್ಟ ವಿಎಸ್ಎಸ್ ಯುನಿಟಿ ರಾಕೆಟ್ ಸ್ಪೇಸ್​ನ ಅಂಚನ್ನು ತಲುಪಿ ಈಗ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿದೆ.

ಇದನ್ನೂ ಓದಿ: ಟ್ರಿಪ್ ಟು ಸ್ಪೇಸ್: ಬಾಹ್ಯಾಕಾಶಕ್ಕೆ ಹಾರಲಿದ್ದಾಳೆ ಗುಂಟೂರಿನ ಮಹಿಳೆ

ಇಂದು ರಿಚರ್ಡ್ ಬ್ರಾನ್ಸನ್ ಜೊತ ಆಂಧ್ರದ ಗುಂಟೂರು ಮೂಲದ ಸಿರೀಶಾ ಬಾಂಡ್ಲಾ ಸೇರಿದಂತೆ ತನ್ನ ಕಂಪನಿಯ ಮೂವರು ಉದ್ಯೋಗಿಗಳು ಮತ್ತು ಇಬ್ಬರು ಪೈಲೆಟ್​ಗಳು ವಿಎಸ್ಎಸ್ ಯುನಿಟಿ ಗಗನ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಈ ರಾಕೆಟ್ ಸುರಕ್ಷಿತವಾಗಿ ಪ್ರಯಾಣ ಬೆಳೆಸಲೆಂದು ಇಡೀ ಪ್ರಪಂಚವೇ ಕಾಯುತ್ತಿತ್ತು. ಇದೀಗ ಇಡೀ ತಂಡ ಸೇಫ್ ಆಗಿ ಭೂಮಿಗೆ ಬಂದು ಲ್ಯಾಂಡ್ ಆಗಿದ್ದಾರೆ.

ವಿಎಸ್ಎಸ್ ಯುನಿಟಿ ಒಂದು ರಾಕೆಟ್. ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ಈ ರಾಕೆಟ್ ಅನ್ನು ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯಿಂದ ತಯಾರಿಸಲಾಗಿದೆ. ಈ ವಿಎಸ್ಎಸ್ ಯುನಿಟಿ ಬಿಳಿ ಬಣ್ಣವನ್ನು ಹೊಂದಿದೆ. ಇದಕ್ಕೆ ರಿಚರ್ಡ್ ಬ್ರಾನ್ಸನ್ ತನ್ನ ತಾಯಿ ಹೆಸರು VMS Eve ಎಂದು ನಾಮಕರಣ ಮಾಡಿದ್ದರು.

ಈ VMS Eve ರಾಕೆಟ್ ಸುಮಾರು 85 ಕಿಲೋ ಮೀಟರ್ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ಹಾರಲಿದೆ ಎಂದು ಈಗ ತಿಳಿದು ಬಂದಿದೆ. 34 ವರ್ಷದ ಆಂಧ್ರದ ಮೂಲದ ಸಿರೀಶಾ ಬಾಂದ್ಲಾ ಏರೋನಾಟಿಕಲ್ ಎಂಜಿನಿಯರ್. ಈ ರಾಕೆಟ್ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

The post ಹೊಸ ಇತಿಹಾಸ ಸೃಷ್ಟಿಸಿದ ರಿಚರ್ಡ್ ಬ್ರಾನ್ಸನ್ ಅಂಡ್ ಟೀಂ; ಮೊಟ್ಟಮೊದಲ ‘ಸ್ಪೇಸ್​ ಟೂರ್’ ಸಕ್ಸಸ್ appeared first on News First Kannada.

Source: newsfirstlive.com

Source link