ನವದೆಹಲಿ: ಹೊಸ ಐಟಿ ರೂಲ್ಸ್​ ಪ್ರಶ್ನಿಸಿ ಭಾರತದ ವಿವಿಧ ರಾಜ್ಯಗಳ ಹೈಕೋರ್ಟ್​ನಲ್ಲಿ ಪೆಂಡಿಂಗ್​​ ಇರುವ ಅರ್ಜಿಗಳ ವರ್ಗಾವಣೆ ಕೋರಿ ಕೇಂದ್ರ ಸರ್ಕಾರವೂ ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಈ ಸಂಬಂಧ ಸುಪ್ರೀಂಕೋರ್ಟ್​ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರ, ಎಲ್ಲಾ ಹೈಕೋರ್ಟ್​ಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ವರ್ಗಾವಣೆ ಮಾಡಿ ಎಂದು ಮನವಿ ಮಾಡಿದೆ.

ದೆಹಲಿ ಹೈಕೋರ್ಟ್​ ಸೇರಿದಂತೆ ದೇಶದ ವಿವಿಧ ಹೈಕೋರ್ಟ್​ಗಳಲ್ಲಿ ಹೊಸ ಐಟಿ ರೂಲ್ಸ್​ ಪ್ರಶ್ನಿಸಿ ಅನೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ. 2021ರ ನೂತನ ಐಟಿ ನಿಯಮಗಳ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಈ ಅರ್ಜಿಗಳನ್ನು ಒಂದೆಡೆಗೆ ವರ್ಗಾವಣೆ ಮಾಡಿ. ಆಗ ಸರ್ಕಾರಕ್ಕೆ ಎಲ್ಲಾ ಅರ್ಜಿಗಳನ್ನು ಉತ್ತರಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಕಾನೂನು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

ದೇಶದ ಭದ್ರತೆಗಾಗಿ ನಾವು ಹೊಸ ಐಟಿ ರೂಲ್ಸ್ ಮಾಡಿದ್ದೇವೆ. ಈ ರೂಲ್ಸ್ ಅನ್ನು ಫೇಸ್​​ಬುಕ್​​, ಟ್ವಿಟರ್​​ಸ ಸೇರಿದಂತೆ ಸೋಷಿಯಲ್​ ಮೀಡಿಯಾ ಒಟಿಟಿ ಪ್ಲೇಯರ್ಸ್​ಗೆ ಅನ್ವಯವಾಗಲಿವೆ. ಇವುಗಳನ್ನು ನಿಯಂತ್ರಿಸುವ ಸಲುವಾಗಿಯೇ ಈ ಐಟಿ ರೂಲ್ಸ್ ಮಾಡಲಾಗಿದೆ. ಅದರೀಗ, ಈ ಐಟಿ ರೂಲ್ಸ್​ 2021 ಪ್ರಶ್ನಿಸಿ ವಿವಿಧ ಸಂಸ್ಥೆಗಳು ಹೈಕೋರ್ಟ್​ಲ್ಲಿ ಸರ್ಜಿ ಸಲ್ಲಿಸಿವೆ.

The post ಹೊಸ ಐಟಿ ರೂಲ್ಸ್ ಮಾನ್ಯತೆ ಪ್ರಶ್ನೆ; ಹೈಕೋರ್ಟ್​​ನ ಪೆಂಡಿಂಗ್ ಅರ್ಜಿಗಳ ವರ್ಗಾವಣೆಗೆ ಸುಪ್ರೀಂ ಮೊರೆ ಹೋದ ಕೇಂದ್ರ appeared first on News First Kannada.

Source: newsfirstlive.com

Source link