ಹೊಸ ಗವರ್ನರ್ ನೇಮಕ​​ -ಕರ್ನಾಟಕ ಸೇವೆಗೆ ಯಾರೇ ಬಂದ್ರೂ ಸ್ವಾಗತ ಎಂದ ಡಿ.ಕೆ ಶಿವಕುಮಾರ್​​

ಹೊಸ ಗವರ್ನರ್ ನೇಮಕ​​ -ಕರ್ನಾಟಕ ಸೇವೆಗೆ ಯಾರೇ ಬಂದ್ರೂ ಸ್ವಾಗತ ಎಂದ ಡಿ.ಕೆ ಶಿವಕುಮಾರ್​​

ಉಡುಪಿ: ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್‌ ಚಂದ್ ಗೆಹ್ಲೋಟ್​ರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದರ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತಾಡಿದ ಡಿ.ಕೆ ಶಿವಕುಮಾರ್​​ ಅವರು, ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕಗೊಂಡ ಥಾವರ್‌ ಚಂದ್ ಗೆಹ್ಲೋಟ್​ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾರೂ ಬೇಕಾದರೂ ರಾಜ್ಯದ ಸೇವೆ ಮಾಡಲು ಬರಬಹುದು. ನಾವು ಎಲ್ಲರನ್ನು ಸ್ವಾಗತಿಸುತ್ತೇನೆ, ನಮಗೆ ಇದರ ಬಗ್ಗೆ ಸಂತೋಷವೂ ಇದೆ ಎಂದು ಡಿ.ಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

ಈಗಷ್ಟೇ ಅಧಿಕಾರಾವಧಿ ಪೂರ್ಣಗೊಳಿಸಿದ ನಿರ್ಗಮಿತ ರಾಜ್ಯಪಾಲರಾದ ವಜುಭಾಯಿ ವಾಲಾರು ತಮ್ಮ ಕೈಲ್ಲಾದ ಸೇವೆಯನ್ನು ರಾಜ್ಯಕ್ಕೆ ಸಲ್ಲಿಸಿದ್ದಾರೆ. ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಬಹುದು, ನಾವು ಬಯಸಿದಾಗೆಲ್ಲಾ ಭೇಟಿ ಮಾಡಿದ್ದಾರೆ. ಕಾಂಗ್ರೆಸ್​ನೊಂದಿಗೆ ಸೌಜನದಿಂದಲೇ ಚರ್ಚಿಸಿದ್ದಾರೆ. ಕೊನೆಗೆ ತಮ್ಮ ಹೈಕಮಾಂಡ್​ ಹೇಳಿದಂತೆ ನಡೆದುಕೊಂಡಿದ್ದಾರೆ ಅಷ್ಟೇ ಎಂದು ಮಾರ್ಮಿಕವಾಗಿ ತಿವಿದರು.

ಹೊಸ ಗವರ್ನರ್​​ ಹಿನ್ನಲೆಯೇನು?

ಇನ್ನು, ರಾಜ್ಯಸಭಾ ಸದಸ್ಯರಾದ 73 ವರ್ಷದ ಥಾವರ್ ಚಂದ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದರು. ಈಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕ ರಾಜಭವನದತ್ತ ಮುಖ ಮಾಡಿದ್ದಾರೆ. ತಮ್ಮನ್ನು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಕ್ಕೆ ಥಾವರ್ ಚಂದ್ ಅವರು, ತಮ್ಮ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

The post ಹೊಸ ಗವರ್ನರ್ ನೇಮಕ​​ -ಕರ್ನಾಟಕ ಸೇವೆಗೆ ಯಾರೇ ಬಂದ್ರೂ ಸ್ವಾಗತ ಎಂದ ಡಿ.ಕೆ ಶಿವಕುಮಾರ್​​ appeared first on News First Kannada.

Source: newsfirstlive.com

Source link