ಹೊಸ ದಾಖಲೆ ಬರೆದ ಚಾಹಲ್​​.. ಏಕದಿನ ಕ್ರಿಕೆಟ್​​ನಲ್ಲಿ ಶತಕ ಬಾರಿಸಿದ್ರು


ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್​​ ಮಾಡಿದ ಇಂಡೀಸ್​​ ಭಾರತದ ಬೌಲರ್ಸ್​ ದಾಳಿಗೆ ತತ್ತರಿಸಿ ಹೋಗಿತ್ತು. ಹೀಗಾಗಿ ಕೇವಲ 177 ರನ್​​ಗೆ ಆಲ್​​ ಔಟ್​​ ಆಗಬೇಕಾಯ್ತು.

1000ನೇ ಏಕದಿನ ಪಂದ್ಯದಲ್ಲಿ ಭಾರತದ ಉತ್ತಮ ಬೌಲಿಂಗ್ ಇಂಡಿಸ್ ಆಟಗಾರರ ದಾಳಿ ಮಾಡಿತ್ತು. ಅದರಲ್ಲೂ ​​ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮಧ್ಯಮ ಕ್ರಮಾಂಕವನ್ನು ಸಂಪೂರ್ಣ ಕೆಡವಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಈ ಮ್ಯಾಚ್​​ನಲ್ಲಿ ಯುಜುವೇಂದ್ರ ಚಾಹಲ್ ಹೊಸ ದಾಖಲೆ ಬರೆದಿದ್ದಾರೆ. ಚಾಹಲ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 100ನೇ ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಚಾಹಲ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 100 ವಿಕೆಟ್ ತೆಗೆದ ಭಾರತದ 5ನೇ ಬೌಲರ್ ಎನಿಸಿದರು.

News First Live Kannada


Leave a Reply

Your email address will not be published.