ಹೊಸ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ


ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ 372 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶಿಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.

ಒಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿಗೆ ಇದು 50ನೇ ಟೆಸ್ಟ್ ಪಂದ್ಯದ ಗೆಲುವಾಗಿದೆ. ಆ ಮೂಲಕ ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ 50 ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿಯ ಈ ಸಾಧನೆಯನ್ನ ಬಿಸಿಸಿಐ ಅಭಿನಂದಿಸಿ ಟ್ವೀಟ್​ ಮಾಡಿದೆ.

ಇನ್ನು ನಾಯಕನಾಗಿ 66 ಪಂದ್ಯಗಳಲ್ಲಿ ಕೊಹ್ಲಿ, ಭಾರತ ತಂಡವನ್ನು ಪ್ರತಿನಿಧಿಸಿದ್ದು, ಈ ಪೈಕಿ 39 ಪಂದ್ಯಗಳಲ್ಲಿ ಜಯಗಳಿಸಿ 16ಪಂದ್ಯಗಳಲ್ಲಿ ಭಾರತ ಸೋತಿದೆ. 11 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

News First Live Kannada


Leave a Reply

Your email address will not be published. Required fields are marked *