ಎಲ್ಲರೂ ಕಾಯ್ತಿದ್ದ ಆ ದಿನ ಬಂದೇ ಬಿಡ್ತು. ಹೊಸ ಸೀರಿಯಲ್​​ ನೋಡಿ ತುಂಬಾ ಆಯ್ತು ಅಂದೋರಿಗೆ; ಅದೇ ಧಾರವಾಹಿಗಾಗಿ ಕಾಯ್ತಿದ್ದೋರಿಗೆ ಇಲ್ಲಿದೆ ಸಿಹಿಸುದ್ದಿ. ಹೌದು, ಹಿಟ್ಲರ್ ಕಲ್ಯಾಣ ನಡೆಯಲು ಮುಹೂರ್ತ ಫಿಕ್ಸ್ ಆಗಿದೆ. ಕರೆಕ್ಟಾಗಿ ಇನ್ನೂ ಎರಡು ವಾರಕ್ಕೆ ಹಿಟ್ಲರ್ ನಿಮ್ಮ ಮುಂದೆಯೇ ಬರ್ತಾನೆ.

ಹಿಟ್ಲರ್​​​ ಕಲ್ಯಾಣ ಜುಲೈ 19ನೇ ತಾರೀಕಿನಂದು ನಿಮ್ಮ ಮುಂದೆ ಬರಲಿದೆ. ಈಗಾಗಲೇ ಹಿಟ್ಲರ್ ಕಲ್ಯಾಣ ಸೀರಿಯಲ್‌ನ ಹೊಸ ಪ್ರೊಮೋ ರಿಲೀಸ್ ಆಗಿದೆ. ಹಿಟ್ಲರ್‌ನ ಮನದನ್ನೆಯ ಫ್ಯಾಮಿಲಿಯನ್ನ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ಲೀಲಾನಾ ಯಡವಟ್ಟುಗಳನ್ನ ತೋರಿಸಲಾಗಿದೆ. ಹಿಟ್ಲರ್ ಕಲ್ಯಾಣ ಸೀರಿಯಲ್ ಹೀರೋಯಿನ್ ಆಗಿ ಮಲೈಕಾ ಆಯ್ಕೆಯಾಗಿದ್ದಾರೆ. ಜೊತೆಗೆ ಲೀಲಾ ತಾಯಿಯ ಪಾತ್ರದಲ್ಲಿ ನಟಿ ಅಭಿನಯ ಕಾಣಿಸಿಕೊಂಡಿದ್ದಾರೆ.

ನಟ, ದಿಲೀಪ್‌ ರಾಜ್‌ ಕಿರುತೆರೆಗೆ ಬಣ್ಣ ಹಚ್ಚಿದ್ದಾರೆ. ಕೇವಲ ನಟಿಸೋದಷ್ಟೇ ಅಲ್ಲದೇ, ನಿರ್ಮಾಣ ಜವಾಬ್ದಾರಿಯೂ ಇವರೇ ಹೊತ್ತುಕೊಂಡಿದ್ದಾರೆ. ಪಾರು ಧಾರವಾಹಿ ನಿರ್ಮಿಸಿರೋ ದಿಲೀಪ್‌ ರಾಜ್‌ಗೆ ಈ ಪ್ರಾಜೆಕ್ಟ್ ಮೇಲೆ ಸಾಕಷ್ಟು ಹೋಪ್ಸ್‌ ಇದೆ. ಜನರಿಗೂ ಈ ಧಾರವಾಹಿಯ ಮೇಲೆ ನಿರೀಕ್ಷೆ ಜಾಸ್ತಿಯಾಗಿದೆ. ಇದೇ ಜುಲೈ 19ರಂದು ಬರ್ತಿರೋ ಹಿಟ್ಲರ್‌ಗೆ ನಮ್ಮ ಕಡೆಯಿಂದ ಆಲ್‌ ದಿ ಬೆಸ್ಟ್‌.

The post ಹೊಸ ಧಾರವಾಹಿಗಾಗಿ ಕಾಯ್ತಿದ್ದೋರಿಗೆ ಇಲ್ಲಿದೆ ಗುಡ್​ ನ್ಯೂಸ್​​ – ಇದೇ ಜು.19ಕ್ಕೆ ನಿಮ್ಮ ಮುಂದೆ ಬರ್ತಿದೆ ಈ ಸೀರಿಯಲ್​! appeared first on News First Kannada.

Source: newsfirstlive.com

Source link