‘ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ಬೇಕು ಅಂತಿದ್ರು’ -ಅಪ್ಪು ಸಮಾಧಿ ಮೇಲೆ ಕೈ ಇಟ್ಟು ಕುಳಿತ ಸಿದ್ದಾರ್ಥ್​


ಬೆಂಗಳೂರು: ಅಪ್ಪು ನಮ್ಮಿಂದ ದೂರ ಆಗಿ 11 ದಿನಗಳು ಕಳೆದಿದೆ. ಆದರೆ ಇಂದಿಗೂ ಅವರು ನಮ್ಮೊಂದಿಗೆ ಇಲ್ಲ ಅಂತ ನಂಬಲು ಆಗುತ್ತಿಲ್ಲ ಎಂದು ತಮಿಳು ನಟ ಸಿದ್ದಾರ್ಥ್​ ಹೇಳಿದ್ದಾರೆ.

ಅಪ್ಪು 11ನೇ ದಿನದ ಪುಣ್ಯ ಸ್ಮರಣೆ ಕಾರ್ಯವನ್ನು ಇಂದು ಕುಟುಂಬಸ್ಥರು ನೆರವೇರಿಸಿದ್ದರು. ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ ನಟ ಸಿದ್ದಾರ್ಥ್,​ ಅಪ್ಪು ಸಮಾಧಿಯ ಬಳಿ ಕುಳಿತು ಕಣ್ಣೀರಿಟ್ಟರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಾರ್ಥ್​, ಅಪ್ಪು ನಮ್ಮಿಂದ ದೂರ ಆಗಿ 11 ದಿನಗಳು ಕಳೆದಿದೆ. ಆದರೆ ಇಂದಿಗೂ ಅವರು ನಮ್ಮೊಂದಿಗೆ ಇಲ್ಲ ಅಂತ ನಂಬಲು ಆಗುತ್ತಿಲ್ಲ. ಪುನೀತ್​ ಇದ್ದರೂ ಅಂತ ನಾನು ಹೇಳೋಕೆ ಇಷ್ಟಪಡೋದಿಲ್ಲ, ಎಂದಿಗೂ ನಮ್ಮೊಂದಿಗೆ ಇರುತ್ತಾರೆ ಅಂತ ಹೇಳುತ್ತೇನೆ.. ಪುನೀತ್​​ರನ್ನು ಪ್ರತಿ ಬಾರಿ ಭೇಟಿ ಮಾಡಿದ ಸಂದರ್ಭದಲ್ಲಿ ನಾನು ತುಂಬಾ ಲಕ್ಕಿ ಅಂತ ಅನ್ಕೋತ್ತಿದೆ.

ಪ್ರತಿ ಸಲ ಭೇಟಿ ಆದ ಸಂದರ್ಭದಲ್ಲೂ ಒಳ್ಳೆ ವಿಚಾರಗಳನ್ನೇ ಹೇಳುತ್ತಿದ್ದರು. ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು. ಬೇರೆ ವ್ಯಕ್ತಿಯ ಬಗ್ಗೆ ಒಳ್ಳೆ ವಿಚಾರಗಳನ್ನೇ ಮಾತನಾಡುತ್ತಿದ್ದರು. ನಾನು ಸಿನಿಮಾಗಳನ್ನು ನಿರ್ಮಾಣ ಮಾಡಬೇಕು.. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅಂತ ಹೇಳುತ್ತಿದ್ದರು. ಅಪ್ಪು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥೀಸುತ್ತೇನೆ. ನಾನು ಕೂಡ ಪುನೀತ್​ ರಾಜ್​​ಕುಮಾರ್ ಫ್ಯಾನ್​.. ಯಾರು ಪುನೀತ್​ ಸ್ಥಾನವನ್ನು ತುಂಬಲು ಬೇರೆ ಯಾರಿಂದಲೂ ಆಗೋದಿಲ್ಲ ಎಂದು ಕಣ್ಣೀರಿಟ್ಟರು.

News First Live Kannada


Leave a Reply

Your email address will not be published.