ಹೊಸ ಪ್ರಯತ್ನಕ್ಕೆ ಕೈಹಾಕಿದ ‘ರಂಗೋಲಿ’ಯ ಅಭಿ..!


ರಂಗೋಲಿ ಮೂಲಕ ಮನೆಮಾತದ ನಟಿ ಸಿರಿ ಇಂದಿಗೂ ಎಂದಿಗೂ ವೀಕ್ಷಕರ ಮನಸ್ಸಿನಲ್ಲಿ ಸ್ಪೆಷಲ್​ ಜಾಗ ಪಡೆದುಕೊಂಡಿದ್ದಾರೆ. ನಂತರದ ದಿನಗಳಲ್ಲಿ ಸಾಕಷ್ಟು ಪಾತ್ರಗಳನ್ನ ಅವ್ರು ಮಾಡಿದ್ರೂ ಕೂಡ ಇಂದಿಗೂ ಅವ್ರನ್ನ ಜನ ಗುರ್ತಿಸೋದು ರಂಗೋಲಿಯ ಅಭಿ ಪಾತ್ರದ ಮೂಲಕ.

ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿಗೆ ಲಾಂಗ್​​ ಗ್ಯಾಪ್​ನ ನಂತರ ಸಿರಿ ಎಂಟ್ರಿಕೊಟ್ಟಿದ್ದಾರೆ. ಈ ಸೀರಿಯಲ್​ನಲ್ಲಿ ಕೂಡ ಸಿರಿ ಸಾಫ್ಟ್​ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಪೀಠಿಕೆ ನೀಡೋಕೆ ಕಾರಣ ಇಷ್ಟು ದಿನ ಸೌಮ್ಯವಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿರಿಜಾ ಅವ್ರು ದೊಡ್ಡ ಚೆಂಜ್​​ ಓವರ್​ ಮೂಲಕ ವೀಕ್ಷಕರ ಮುಂದೆ ಬರ್ತಿದ್ದಾರೆ.

ಯೆಸ್​, ಸಿರಿ ಇದೇ ಮೊದಲ ಬಾರಿಗೆ ಖಡಕ್​ ರೋಲ್​ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಉದಯ ವಾಹಿನಿಯಲ್ಲಿ ಮೂಡಿಬರುತ್ತಿರುವ ಮದುಮಗಳು ಸೀರಿಯಲ್​ನಲ್ಲಿ ಘಾಟಿ, ಖಡಕ್​ ಅತ್ತೆ ಪಾತ್ರವನ್ನ ನಿರ್ವಹಿಸಲಿದ್ದಾರೆ ಸಿರಿ.

ಸದ್ಯ ಕನ್ನಡತಿಯಲ್ಲಿ ವಿಕ್ರಾಂತ್​ ಪಾತ್ರವನ್ನ ನಿರ್ವಹಿಸುತ್ತಿರುವ ನಟ ಭವಿಷ್ ಮದುಮಗಳು​ ಸೀರಿಯಲ್​ನಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ದೇವಯಾನಿ ಎಂಬ ಸೀರಿಯಲ್​ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಕ್ಷಿತಾ.ಪಿ ಅವ್ರು ಭವಿಷ್​​ಗೆ ಮದುಮಗಳಾಗಲಿದ್ದಾರೆ.

ಅಂದ್ಹಾಗೆ, ಮದುಮಗಳಿಗೆ ಆಕ್ಷನ್​ ಕಟ್​ ಹೇಳ್ತಿರೊದು ಕಾವ್ಯಾಂಜಲಿ ಟೀಮ್. ಮತ್ತೊಂದು ಸಮಾಚಾರ ಅಂದ್ರೆ ಮದುಮಗಳು ತೆಲುಗಿನ ಅತು ಅತ್ತಮ್ಮ ಕೂತುರು ಸೀರಿಯಲ್​​ನ​ ರೀಮೆಕ್​ ಆಗಿದ್ದು, ಒಂದು ತುಂಬು ಕುಟುಂಬದ ಹುಡುಗ. ಅವನ ಅಮ್ಮ ಸಖತ್​ ಖಡಕ್​ ಆ್ಯಂಡ್​ ಪವರ್​ಫುಲ್​ ಮಹಿಳೆ. ಇತ್ತ ನಾಯಕಿ ಅತ್ತೆ ಮನೆ ಬಗ್ಗೆ ಸಾವಿರ ಕನಸು ಹೊತ್ತು, ಅತ್ತೆಯನ್ನೇ ತಾಯಿಯಾಗಿ ನೋಡೊ ಸ್ವಭಾವದವಳು. ಈ ಅತ್ತೆ-ಸೊಸೆ ನಡುವೆ ನಡೆಯುವ ಕತೆಯೇ ಮದುಮಗಳು.

ಪವರ್​ಫುಲ್​, ಖದರ್​ ಇರುವ ಅತ್ತೆಯಾಗಿ ನಟಿ ಸಿರಿ ಬರುತ್ತಿದ್ದು, ಅವ್ರ ಈ ಹೊಸ ಲುಕ್​, ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ವೀಕ್ಷಕರು ಹೇಗೆ ಸ್ವಿಕರಿಸುತ್ತಾರೆ ಎಂಬುವುದನ್ನ ಕಾದು ನೋಡಬೇಕು. ಒಟ್ನಲ್ಲಿ ಸಿರಿ ಅವ್ರ ಈ ಹೊಸ ಪ್ರಯತ್ನಕ್ಕೆ ಆಲ್​ ದಿ ಬೆಸ್ಟ್​.

News First Live Kannada


Leave a Reply

Your email address will not be published. Required fields are marked *