ನವ ದೆಹಲಿ : ರೈಲ್ವೆ ನಿಲ್ದಾಣಗಳಲ್ಲಿ ನೀವು ಹಲವು ಬಾರಿ ಉಚಿತ ವೈಫೈ (Wifi) ಸೇವೆ ಬಳಸಿರಬಹುದು. ರೈಲ್ವೆಗೆ  ವೈಫೈ ಒದಗಿಸುವ ಕಂಪನಿಯಾದ ರೈಲ್ ಟೆಲ್  (RailTel) ಹಲವು ಪ್ರಿಪೇಯ್ಡ್ ವೈ-ಫೈ ಯೋಜನೆಗಳನ್ನು ಪ್ರಯಾಣಿಕರಿಗಾಗಿ ಬಿಡುಗಡೆ ಮಾಡಿದೆ.

ಈ ಪ್ರಿಪೇಯ್ಡ್ ಈ ಮೂಲಕ ನೀವು ದೇಶದ 4,000 ರೈಲ್ವೆ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಪಾವತಿ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಬಳಸಲು ಸಾಧ್ಯವಾಗಲಿದೆ. 10 ರೂ.ಗಳಿಂದ ಪ್ರಾರಂಭವಾಗುವ ಈ ಪ್ರೀ ಪೇಯ್ಡ್ ಯೋಜನಗಳಲ್ಲಿ, ನಿಮಗೆ ನೀವು ಪಾವತಿಸಿದ ಹಣಕ್ಕೆ ಅನುಗುಣವಾಗಿ  ಡೇಟಾ ನೀಡಲಾಗುತ್ತದೆ.

ಓದಿ :  ಪಶ್ಚಿಮ ಬಂಗಾಳ : ನಂದಿಗ್ರಾಮ ಕ್ಷೇತ್ರದಲ್ಲಿ ಬ್ಯಾನರ್ಜಿ v/s ಸುವೇಂದು ಅಧಿಕಾರಿ..!?

ಇನ್ನು, ರೈಲ್ ಟೆಲ್ ಈಗಾಗಲೇ ದೇಶದಾದ್ಯಂತ ಸುಮಾರು 5950 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ನೀಡುತ್ತಿದೆ.

ರೈಲು ಪ್ರಯಾಣಿಕ ತನ್ನ ಸ್ಮಾರ್ಟ್ ಫೋನ್ ಮೂಲಕ ಈ ಉಚಿತ ವೈಫೈ ಸೇವೆಯನ್ನು ಪಡೆದುಕೊಳ್ಳಬಹುದು. ಆದರೇ, ಈ ವೈಫೈಯನ್ನು ಪಡೆಯಲು ತಮ್ಮ ಮೊಬೈಲ್ ಗೆ ಬರುವ ಒಟಿಪಿ(OTP) ಯನ್ನು ವೆರಿಫೈ ಮಾಡಬೇಕಾಗುತ್ತದೆ.

‘ನೂತನ ಪ್ರೀ ಪೇಯ್ಡ್ ಯೋಜನೆಯ ಅಡಿಯಲ್ಲಿ ಪ್ರಯಾಣಿಕರು ನಿತ್ಯ 30 ನಿಮಿಷಗಳ ಅವಧಿಗೆ 1MBPS ಸ್ಪೀಡ್ ನಲ್ಲಿ ಇಂಟರ್ ನೆಟ್ ಬಳಸಿಕೊಳ್ಳಬಹದು. ಆದರೆ, ಒಂದು ವೇಳೆ ಯಾತ್ರಿಗಳು 34 MBPS ವೇಗದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಬಳಸಲು ಬಯಸುತ್ತಿದ್ದರೆ. ಕಡಿಮೆ ಬೆಲೆಯ ಯಾವುದಾದರು ಒಂದು ಪ್ಲಾನ್ ನ್ನು ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರೈಲ್ ಟೆಲ್ ಪ್ರೀ ಪೇಯ್ಡ್ ಪ್ಲ್ಯಾನ್ ಗಳು ಈ ಕೆಳಗಿನಂತಿವೆ

* 10 ರೂಪಾಯಿಗೆ ಒಂದು ದಿನಕ್ಕೆ 5 ಜಿಬಿ

* 15 ರೂಪಾಯಿಗೆ ಒಂದು ದಿನಕ್ಕೆ 10 ಜಿಬಿ

* 20 ರೂಪಾಯಿಗೆ ಐದು ದಿನಗಳವರೆಗೆ 10 ಜಿಬಿ

* 30 ರೂಪಾಯಿಗೆ ಐದು ದಿನಗಳವರೆಗೆ 20 ಜಿಬಿ

* 40 ರೂಪಾಯಿಗೆ ಹತ್ತು ದಿನಗಳವರೆಗೆ 20 ಜಿಬಿ

* 50 ರೂಪಾಯಿಗೆ ಹತ್ತು ದಿನಗಳವರೆಗೆ 30 ಜಿಬಿ

* 70 ರೂಪಾಯಿಗೆ 30 ದಿನಗಳವರೆಗೆ 60 ಜಿಬಿ

ಓದಿ :  ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More