ಕೊಡಗು: ಜಿಲ್ಲೆಯಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಗುಡ್ಡಪ್ರದೇಶದ ನಿವಾಸಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಸೂಚನೆ ನೀಡಿದೆ. ಹೀಗಾಗಿ ಮಡಿಕೇರಿಯ ಇಂದಿರಾ ನಗರ, ಚಾಮುಂಡೇಶ್ವರಿ ನಗರ ನಿವಾಸಿಗಳಲ್ಲಿ ಭೀತಿ ಹೆಚ್ಚಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗಷ್ಟೇ ಸಚಿವ ಸೋಮಣ್ಣ ಸಂತ್ರಸ್ತರಿಗಾಗಿ ಮಡಿಕೇರಿ ತಾಲೂಕಿನ ಬಿಳಿಗೇರಿಯಲ್ಲಿ 22 ಹೊಸ‌ಮನೆಗಳನ್ನ ಉದ್ಘಾಟನೆ ಮಾಡಿದ್ದಾರೆ. ಆದ್ರೆ ಇಲ್ಲಿಯವರೆಗೂ ಸಚಿವರು ಉದ್ಘಾಟಿಸಿದ ಮನೆಗಳಿಗೆ ಹಕ್ಕು ಪತ್ರವನ್ನ ನೀಡಲಾಗಿಲ್ಲ.

ಹೀಗಾಗಿ ಗುಡ್ಡದ ಕೆಳಗಿರೋ ಜನರಿಗೆ ಭಾರೀ ಮಳೆಗೆ ಮನೆ ಕುಸಿಯೋ ಆತಂಕದಲ್ಲಿದ್ದಾರೆ. ಅತ್ತ, ಹೊಸ‌ ಮನೆಗೂ ತೆರಳಲಾಗದೆ, ಇರೋ ಮನೆಯಲ್ಲಿ ಇರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

The post ಹೊಸ ಮನೆಯೂ ಸಿಕ್ಕಿಲ್ಲ, ಹಳೇ ಮನೆಯಲ್ಲಿ ಇರೋಕೆ ಆಗ್ತಿಲ್ಲ.. ಆತಂಕದಲ್ಲಿ ಕೊಡಗಿನ ಸಂತ್ರಸ್ತರು appeared first on News First Kannada.

Source: newsfirstlive.com

Source link