2021ರ ಐಪಿಎಲ್​ ಆವೃತ್ತಿ ಬಯೋ ಬಬಲ್​ ವಾತಾವರಣದಲ್ಲಿ ನಡೆಯುತ್ತಿದ್ದರೂ ಆಪ್​​ ಸ್ಪಿನ್ನರ್​​​ ಆರ್​.ಅಶ್ವಿನ್​​ ಹಾಗೂ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಐಪಿಎಲ್​​ನಿಂದ ಹೊರ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಐಪಿಎಲ್​ ಟೂರ್ನಿ ಮುಂದುವರಿಯಲಿದೆ. ಆದರೆ ಯಾವುದೇ ಆಟಗಾರರು ಹೋಗಬೇಕು ಅಂದುಕೊಂಡರೇ ಹೋಗಬಹುದು ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ಕಳೆದ ಎರಡೂ ವಾರಗಳಿಂದ ಐಪಿಎಲ್​​ ಟೂರ್ನಿ ಸುಗಮವಾಗಿ ಸಾಗುತ್ತಿರುವ ನಡವೆಯೂ ರಾಜಸ್ಥಾನ ರಾಯಲ್ಸ್ ತಂಡದ ಆ್ಯಂಡ್ರೂ ಟೈ, ಆರ್​ಸಿಬಿಯ ರಿಚಾರ್ಡ್​​ಸನ್​​, ಜಂಪಾ ಐಪಿಎಲ್​ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಐಪಿಎಲ್​ನಿಂದ ಹೊರ ನಡೆಯುತ್ತಿರುವುದಕ್ಕೇ ವೈಯುಕ್ತಿಕ ಕಾರಣಗಳೇ ಕಾರಣ ಎಂದು ಜಂಪಾ ಹಾಗೂ ರಿಚಾರ್ಡ್​​ಸನ್ ಹೇಳಿದ್ದಾರೆ. ಆದರೆ ಆ್ಯಂಡ್ರೂ ಟೈ ಮಾತ್ರ ಕೊರೊನಾ ಕಾರಣದಿಂದ ನಾನು ದೇಶದಿಂದ ದೂರ ಉಳಿಯಬೇಕಾದ ಸ್ಥಿತಿ ಎದುರಾಗುವ ಮುನ್ನ ಕುಟುಂಬವನ್ನು ಕೂಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಉಳಿದಂತೆ 2021ರ ಟೂರ್ನಿಯಲ್ಲಿ ರಿಚಾರ್ಡ್​​ಸನ್​​ ಮಾತ್ರ ಒಂದು ಪಂದ್ಯದಲ್ಲಿ ಪ್ಲೇಯಿಂಗ್​​ ಇಲೆವೆನ್​​ನಲ್ಲಿ ಸ್ಥಾನ ಪಡೆದಿದ್ದು, ಉಳಿದಂತೆ ಜಂಪಾ ಹಾಗೂ ಆ್ಯಂಡ್ರೂ ಟೈ ಆಡುವ 11 ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಜಂಪಾರನ್ನು 1.5 ಕೋಟಿ ರೂ., ರಿಚಾರ್ಡ್​​ಸನ್​ ಅವರನ್ನನು 4 ಕೋಟಿ ರೂಪಾಯಿಗಳಿಗೆ ಆರ್​ಸಿಬಿ ಖರೀದಿ ಮಾಡಿತ್ತು.

The post ಹೋಗಬೇಕು ಅನ್ಕೊಂಡವ್ರು ಹೋಗಬಹುದು, ಆದ್ರೆ ಐಪಿಎಲ್​ ಮುಂದುವರಿಯುತ್ತೆ -ಬಿಸಿಸಿಐ appeared first on News First Kannada.

Source: News First Kannada
Read More