ಹೋಟೆಲ್​ನಲ್ಲಿ ಒಂದು ದಿನದ ಸಿಸಿಟಿವಿ ಫೂಟೇಜ್ ಡಿಲೀಟ್; ಪೊಲೀಸರಿಂದ ಮಾಲೀಕರಿಗೆ ನೋಟಿಸ್

ಹೋಟೆಲ್​ನಲ್ಲಿ ಒಂದು ದಿನದ ಸಿಸಿಟಿವಿ ಫೂಟೇಜ್ ಡಿಲೀಟ್; ಪೊಲೀಸರಿಂದ ಮಾಲೀಕರಿಗೆ ನೋಟಿಸ್

ಮೈಸೂರು: ನಟ ದರ್ಶನ್ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಅಲ್ಲದೇ ಹೋಟೆಲ್​ ಮಾಲೀಕರು 6 ತಿಂಗಳ ಸಿಸಿಟಿವಿ ದೃಶ್ಯವನ್ನ ಸಂಗ್ರಹಿಸಿರಬೇಕು ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಹೇಳಿದ ದಿನದ ಸಿಸಿಟಿವಿ ಫೂಟೇಜ್​ನ್ನ ಸಂದೇಶ್ ಪ್ರಿನ್ಸ್ ಹೋಟೆಲ್ ಡಿಲೀಟ್ ಮಾಡಿದೆ ಎನ್ನಲಾಗಿದ್ದು ಪೊಲೀಸರು ಹೋಟೆಲ್​ಗೆ ನೋಟಿಸ್ ಕೊಟ್ಟಿದ್ದಾರೆ.

ಹೋಟೆಲ್​​ಗೆ ತೆರಳಿ ಸಿಸಿಟಿವಿಯ ಡಿವಿಆರ್ ಪರಿಶೀಲಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದ್ದು ಡಿವಿಆರ್​ನಲ್ಲಿ ಡಿಲೀಟ್ ಆದ ವಿಡಿಯೋ ರಿಕವರಿಗೆ ಪ್ರಯತ್ನಿಸುತ್ತಿದ್ದಾರಂತೆ. ವಿಡಿಯೋ ಡಿಲೀಟ್ ಮಾಡಿದ್ದಕ್ಕೆ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಪ್ರಕರಣದ ತನಿಖಾಧಿಕಾರಿ ಶಶಿಧರ್​ ನೊಟೀಸ್ ನೀಡಿದ್ದಾರೆ ಎನ್ನಲಾಗಿದೆ.

60 ದಿನಗಳ ಕಾಲ ಸಂರಕ್ಷಣೆ ಆಗುವಂತಹ ಸಾಧನ‌ ಅಳವಡಿಕೆ ಮಾಡಿದ್ದರೂ ಸಹ ವಿಡಿಯೋ ಡಿಲೀಟ್ ಮಾಡಿದ್ದು ಯಾಕೆ ಅಂತಾ ತನಿಖಾಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯ ಕಾರಣ ಹೇಳಿದ್ದಾರೆ ಎನ್ನಲಾಗಿದ್ದು ಸದ್ಯ ಹೋಟೆಲ್ ಮಾಲೀಕರ ವಿರುದ್ಧ ಕೇಸ್ ದಾಖಲಿಸೋ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

The post ಹೋಟೆಲ್​ನಲ್ಲಿ ಒಂದು ದಿನದ ಸಿಸಿಟಿವಿ ಫೂಟೇಜ್ ಡಿಲೀಟ್; ಪೊಲೀಸರಿಂದ ಮಾಲೀಕರಿಗೆ ನೋಟಿಸ್ appeared first on News First Kannada.

Source: newsfirstlive.com

Source link