
ಸಾಂಧರ್ಬಿಕ ಚಿತ್ರ
ರೆಸ್ಟೋರೆಂಟ್ಗಳಿಗೆ (Restaurant) ನಾವು ಹೋದಾಗ ನಾವು ತಿನ್ನುವ ಆಹಾರದ ಜೊತೆಗೆ ಸೇವಾ ಶುಲ್ಕವನ್ನು ಪಾವತಿಸುತ್ತೇವೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್ಗಳು ಗ್ರಾಹಕರಿಗೆ ನೀಡಿದ ಸೇವೆಯಲ್ಲಿ ಗ್ರಾಹಕರು ತೃಪ್ತರಾಗಿದ್ದರೆ ಮಾತ್ರ ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು.
ನವದೆಹಲಿ: ದೊಡ್ಡ ದೊಡ್ಡ ಹೋಟೆಲ್ (Hotel) ಅಥವಾ ರೆಸ್ಟೋರೆಂಟ್ಗಳಿಗೆ (Restaurant) ನಾವು ಹೋದಾಗ ನಾವು ತಿನ್ನುವ ಆಹಾರದ ಜೊತೆಗೆ ಸೇವಾ ಶುಲ್ಕವನ್ನು ಪಾವತಿಸುತ್ತೇವೆ. ಅಂದರೆ ಹೋಟೆಲ್ ಅಥವಾ ರೆಸ್ಟೋರೆಂಟ್ ನಮಗೆ ನೀಡಿದ ಸೇವೆಗಳಿಗಾಗಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಪಡೆಯುತ್ತವೆ. ಕೆಲವೊಮ್ಮೆ, ಗ್ರಾಹಕರು ಸೇವೆಗಳಲ್ಲಿ ಸಂತೋಷವಾಗದಿದ್ದರೂ ಸಹ ಹೋಟೆಲ್ ಅಥವಾ ರೆಸ್ಟೋರೆಂಟ್ಗಳು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸಲಾಗುತ್ತದೆ. ಆದರೆ ನಾವು ಇಲ್ಲಿ ತಿಳಿಯಬೇಕಾದ ಸಂಗತಿ ಏನೆಂದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್ಗಳು ಗ್ರಾಹಕರಿಗೆ ನೀಡಿದ ಸೇವೆಯಲ್ಲಿ ಗ್ರಾಹಕರು ತೃಪ್ತರಾಗಿದ್ದರೆ ಮಾತ್ರ ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು.
ಇದನ್ನು ಓದಿ: ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ
ಈ ಕುರಿತು ಕೆಲವು ಗೊಂದಲಗಳಿವೆ. ಹೀಗಾಗಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (Ministry of Consumer Affairs) ಸೋಮವಾರ ಹೋಟೆಲ್ ಅಥವಾ ರೆಸ್ಟೋರೆಂಟ್ಗಳು ತಮ್ಮ ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕದ ವಿಷಯದ ಕುರಿತು ರೆಸ್ಟೋರೆಂಟ್ ಮಾಲೀಕರ ಸಭೆಯನ್ನು ಕರೆದಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಯು (DoCA) ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದೊಂದಿಗೆ ಜೂನ್ 2, 2022 ರಂದು ಸಭೆ ನಡೆಸಲಿದೆ. ಸಭೆಯಲ್ಲಿ “ರೆಸ್ಟೋರೆಂಟ್ಗಳು ವಿಧಿಸುವ ಸೇವಾ ಶುಲ್ಕಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು” ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಇಲಾಖೆ ಹೇಳಿಕೆಯನ್ನು ಹೊರಡಿಸಿದೆ.
ರೆಸ್ಟೋರೆಂಟ್ಗಳು ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುವ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗೇ ಗ್ರಾಹಕರು ನೋಂದಾಯಿಸಿದ ಕುಂದುಕೊರತೆಗಳ ಹಿನ್ನೆಲೆಯಲ್ಲಿ ಇದು ಚರ್ಚೆಗೆ ಬಂದಿದೆ. ಸರ್ಕಾರವು ಏಪ್ರಿಲ್ 2017 ರಲ್ಲಿ ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ ರೆಸ್ಟೋರೆಂಟ್ಗಳಲ್ಲಿ ‘ಸೇವಾ ಶುಲ್ಕ’ ಪಾವತಿಯು ಸ್ವಯಂಪ್ರೇರಿತ ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿರುತ್ತದೆ ಎಂದು ಹೇಳಿದೆ.
ಇದನ್ನು ಓದಿ: ವಿಧಾನ ಪರಿಷತ್ ಚುನಾವಣೆ: ರಾಜ್ಯದಲ್ಲಿ ಪರಿಷತ್ ಫೈಟ್ ಜನರಿಗೇನು ಲಾಭ? ವೀಕ್ಷಿಸಿ ಲೈವ್
ಸೇವಾ ಶುಲ್ಕಗಳ ಕುರಿತು ಸರ್ಕಾರದ ಮಾರ್ಗಸೂಚಿಗಳು ಏನು ಹೇಳುತ್ತವೆ?