ಬೆಳಗಾವಿ: ಹೋಮ ಹವನ ಮಾಡುವ ಮೂಲಕ ವಾತಾವರಣ ಶುದ್ಧೀಕರಿಸುತ್ತದೆ, ಸನಾತನ ಹಿಂದೂ ಸಂಸ್ಕøತಿ, ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ಇದೀಗ ಕೊರೊನಾ ಎಲ್ಲ ಕಡೆ ಹೆಚ್ಚಾಗಿದ್ದರಿಂದ ನಮ್ಮ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿ ಗಲ್ಲಿಯಲ್ಲಿ ಆಯಾ ಭಾಗದ ಯುವಕ ಮಂಡಳಿ, ಮಹಿಳಾ ಸಂಘಗಳು ಹಾಗೂ ಅಲ್ಲಿನ ಪ್ರಮುಖರು ತಮ್ಮ ಮನೆ, ಗಲ್ಲಿಗಳಲ್ಲಿ ಹೋಮ ಮಾಡಬೇಕಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

ಹೊಸೂರಿನಲ್ಲಿ ಸುಮಾರು 50 ಕಡೆಗಳಲ್ಲಿ ಈ ರೀತಿ ಹೋಮ ಹವನ ಮಾಡಲಾಗುತ್ತಿದೆ. ಈ ಹಮನದಲ್ಲಿ ತುಪ್ಪ, ಅಜುವಾನ, ಅಕ್ಕಿ, ಬೇವಿನ ಸೊಪ್ಪು ಸೇರಿದಂತೆ ಇತರೆ ಪದಾರ್ಥಗಳನ್ನು ಹಾಕಿ ಹೋಮ ಮಾಡಲಾಗುತ್ತದೆ. ಬಳಿಕ ಗಾಡಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದರ ಮೂಲಕ ಹೋಮದ ಹೊಗೆ ಸಿಂಪಡಿಸಬಹದು. ಇಂದಿನಿಂದ ಇದು ಜೂನ್ 15ರ ವರೆಗೆ ಇದೇ ರೀತಿ ಹೋಮ ನಡೆಸಲಾಗುವುದು.

ಈ ಹೋಮದಲ್ಲಿ ಬೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ,ಅಕ್ಕಿ, ಕವಡಿ, ಧೂಪ ಹಾಗೂ ಲವಂಗವನ್ನು ಈ ಹೋಮದಲ್ಲಿ ಹಾಕುತ್ತಾರೆ. ಇದರಿಂದ ವಾತಾವರಣ ಶುದ್ಧವಾಗುತ್ತದೆ. ಅಲ್ಲದೆ ಮಾಹಾಮಾರಿ ಕೊರೊನಾ ತೊಲಗಿ ಎಲ್ಲವೂ ಸರಳವಾಗಲಿದೆ ಎಂದು ತಿಳಿಸಿದರು.

The post ಹೋಮದಿಂದ ಕೊರೊನಾ ತೊಲಗಿಸಬಹುದು, ವಾತಾವರಣ ಶುದ್ಧವಾಗುತ್ತದೆ: ಅಭಯ್ ಪಾಟೀಲ್ appeared first on Public TV.

Source: publictv.in

Source link