ಮಂಡ್ಯ: ಕಾವೇರಿ ಹೋರಾಟದ ಮುಂಚೂಣಿ ನಾಯಕ, ಮಾಜಿ ಸಂಸದ ಜಿ.ಮಾದೇಗೌಡ ಅವರ ಅಂತ್ಯ ಕ್ರಿಯೆ ಇಂದು ಹನುಮಂತನಗರದಲ್ಲಿ ನೆರವೇರಿತು.

ಬಂದೀಗೌಡ ಬಡಾವಣೆಯ ನಿವಾಸದ ಮಾದೇಗೌಡರ ಮಂಡ್ಯ ನಿವಾಸದ ಬಳಿ ಅಂತಿಮ ದರ್ಶನ ಏರ್ಪಡಿಸಲಾಗಿತ್ತು.. ನಂತರ ಮಂಡ್ಯದ ಗಾಂಧಿ ಭವನಕ್ಕೆ ಪಾರ್ಥೀವ ಶರೀರ ರವಾನೆ ಮಾಡಲಾಗಿತ್ತು. ಅಲ್ಲಿಯೂ ಸಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿ. ಮಾದೇಗೌಡರು ಗಾಂಧಿ ಭವನದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ. ಜಿ. ಮಾದೇಗೌಡ ಅಂತಲೂ ಕರೆಯುತ್ತಿದ್ದರು. ಅವರ ಹಿರಿಯ ಮಗ ಪ್ರಕಾಶ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

ಇದನ್ನೂ ಓದಿ: ಕಾವೇರಿ ಹೋರಾಟದ ಮುಂಚೂಣಿ ನಾಯಕ, ಮಾಜಿ ಸಂಸದ ಜಿ. ಮಾದೇಗೌಡ ಇನ್ನಿಲ್ಲ

The post ಹೋರಾಟದ ಬದುಕು ಅಂತ್ಯ; ಪಂಚಭೂತಗಳಲ್ಲಿ ಲೀನವಾದ ಮಂಡ್ಯದ ಗಾಂಧಿ ಜಿ. ಮಾದೇಗೌಡ appeared first on News First Kannada.

Source: newsfirstlive.com

Source link