ಟೆಸ್ಟ್​​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ 2ನೇ ಸೆಷನ್​ನಲ್ಲಿ ಟೀಮ್​ ಇಂಡಿಯಾ ಫೈಟ್​​​ ಬ್ಯಾಕ್​ ಮಾಡಿತು. ಟೀ ವಿರಾಮದ ವೇಳೆಗೆ ಟೀಮ್​ ಇಂಡಿಯಾ 3 ವಿಕೆಟ್​​ ನಷ್ಟಕ್ಕೆ 120 ರನ್​ ಕಲೆ ಹಾಕಿದೆ. 2 ವಿಕೆಟ್​​​ ನಷ್ಟಕ್ಕೆ 69 ರನ್​ಗಳೊಂದಿಗೆ 2ನೇ ಸೆಷನ್​ ಆರಂಭಿಸಿದ ಟೀಮ್​ ಇಂಡಿಯಾ, ಆರಂಭದಲ್ಲೇ ಚೇತೇಶ್ವರ ಪೂಜಾರ ವಿಕೆಟ್​​ ಕಳೆದುಕೊಳ್ತು. 36ನೇ ಎಸೆತಕ್ಕೆ ಖಾತೆ ತೆರದ ಪೂಜಾರ ಇನ್ನಿಂಗ್ಸ್,​​ ಕೇವಲ 8 ರನ್​ಗಳಿಗೆ ಅಂತ್ಯವಾಯ್ತು. ಟ್ರೆಂಟ್​ ಬೋಲ್ಟ್​​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದ ಟೆಸ್ಟ್​ ಸ್ಪೆಷಲಿಸ್ಟ್,​​ ಪೆವಿಲಿಯನ್​ ಸೇರಿದ್ರು. ಬಳಿಕ ಜೊತೆಯಾದ ನಾಯಕ ವಿರಾಟ್​ ಕೊಹ್ಲಿ, ಉಪನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾಗಿದ್ದಾರೆ. 35 ರನ್​ಗಳೊಂದಿಗೆ ಕೊಹ್ಲಿ, 13 ರನ್​ಗಳೊಂದಿಗೆ ರಹಾನೆ ಕ್ರಿಸ್​​ ಕಾಯ್ದು ಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶುಭ್​ಮನ್​ ಗಿಲ್​, ರೋಹಿತ್​ ಶರ್ಮಾ ಅರ್ಧಶತಕದ ಜೊತೆಯಾಟವಾಡಿದ್ರು. ರೋಹಿತ್​ ಶರ್ಮಾ 34 ರನ್​ಗಳಿಸಿ ಔಟಾದ್ರೆ, ಶುಭ್​ಮನ್​ ಗಿಲ್​ 28 ರನ್​ಗಳಿಸಿ ನಿರ್ಗಮಿಸಿದ್ರು.

The post ಹೋರಾಟ ಮುಂದುವರೆಸಿದ ಕೊಹ್ಲಿ, ರಹಾನೆ- 2ನೇ ಸೆಷನ್ ಅಂತ್ಯಕ್ಕೆ ಟೀಮ್ ಇಂಡಿಯಾ 120/3 appeared first on News First Kannada.

Source: newsfirstlive.com

Source link