ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ರ ಸ್ವಾತಂತ್ರ್ಯ ಕುರಿತಾದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗ್ತಿದೆ. ಈ ಬೆನ್ನಲ್ಲೇ ಹಿರಿಯ ನಟ ವಿಕ್ರಮ್ ಗೋಖಲೆ ಕಂಗನಾರ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.
ಪುಣೆಯ ಬ್ರಾಹ್ಮಣ ಮಹಾಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯ ನಟ, ಕಂಗನಾ ನೀಡಿದ ಹೇಳಿಕೆಯನ್ನ ನಾನು ಸಮರ್ಥಿಸಿಕೊಳ್ತೀನಿ. ಅವರ ಹೇಳಿಕೆಗೆ ನನ್ನ ಸಹಮತ ಇದೆ. ನಾವು ಸ್ವಾತಂತ್ರ್ಯ ಪಡೆದದ್ದು ಭಿಕ್ಷೆಯಿಂದಲೇ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕು ಎಂದು ಹೋರಾಟಗಾರರು ಶ್ರಮಿಸಿದ್ರು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಆದ್ರೆ ಆ ಕಾಲದ ದೊಡ್ಡವರು ಹೋರಾಟಗಾರರನ್ನ ಉಳಿಸಲು ಪ್ರಯತ್ನಿಸಿಲ್ಲ. ದೊಡ್ಡವರು ಮೂಕ ಪ್ರೇಕ್ಷಕರಾಗಿಯೇ ಉಳಿದರು. ಹಾಗಾಗಿ ಕಂಗನಾ ಹೇಳಿಕೆಗೆ ನನ್ನ ಸಮ್ಮತಿ ಇದೆ ಅಂತ ನಟಿಯ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: ಕಂಗನಾ ‘ಸ್ವಾತಂತ್ರ್ಯ’ ವಿವಾದ; ‘ಕೋಮುವಾದ ಬಿತ್ತಲು ರಣಾವತ್ ಅಧಿಕೃತ ರಾಯಭಾರಿ’ -ಗಾಂಧೀಜಿ ಮರಿ ಮೊಮ್ಮಗ ವಾಗ್ದಾಳಿ
ಇತ್ತೀಚಿಗೆ ಖಾಸಗಿ ಸುದ್ದಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ‘1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು’ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಹಾಡಿ ಹೊಗಳಿದ್ದರು.
ಇದನ್ನೂ ಓದಿ: ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ -ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್