ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ | Actress Pooja Hegde happy even after Three back to back flop Movies


ಪೂಜಾ ಹೆಗ್ಡೆ ಅವರ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದಕ್ಕೆ ಪೂಜಾ ಹೆಗ್ಡೆ ತಲೆಕೆಡಿಸಿಕೊಂಡಿಲ್ಲ.

ನಟಿ ಪೂಜಾ ಹೆಗ್ಡೆ ಅವರು (Pooja Hegde) ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಯಾವ ಚಿತ್ರವೂ ಗೆಲುವಿನ ಮುಖ ಕಂಡಿಲ್ಲ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದಕ್ಕೆ ಪೂಜಾ ಹೆಗ್ಡೆ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಅವರು ಖಡಕ್ ಉತ್ತರ ನೀಡಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಮಾರ್ಚ್​ 11ರಂದು ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ, ಸಿನಿಮಾ ಸೋಲು ಕಂಡಿತು. ಏಪ್ರಿಲ್ 13ರಂದು ತೆರೆಗೆ ಬಂದಿದ್ದು ದಳಪತಿ ವಿಜಯ್ ನಟನೆಯ ‘ಬೀಸ್ಟ್’ (Beast Movie). ಈ ಸಿನಿಮಾ ನೋಡಿದ ಫ್ಯಾನ್ಸ್ ನಿರಾಸೆಗೊಂಡರು. ಏಪ್ರಿಲ್ 29ರಂದು ತೆರೆಗೆ ಬಂದ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಮಾತ್ರ ಸೀಮಿತವಾದರು. ಈ ಚಿತ್ರ ಕೂಡ ಸೋಲು ಕಂಡಿತು. ಈ ಬಗ್ಗೆ ಎಲ್ಲರೂ ನಾನಾ ರೀತಿಯಲ್ಲಿ ಮಾತನಾಡಿದ್ದರು. ಈಗ ಪೂಜಾ ಹೆಗ್ಡೆ ಇದಕ್ಕೆ ಉತ್ತರ ನೀಡಿದ್ದಾರೆ.

‘ಇದು ಆಟದ ಭಾಗ ಅಷ್ಟೇ. ನಾನು ಆರು ಬ್ಯಾಕ್-ಟು-ಬ್ಯಾಕ್ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದೇನೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆ ರೀತಿಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಪ್ರತಿಯೊಂದು ಚಿತ್ರಕ್ಕೂ ಅದರದ್ದೇ ಆದ ಹಣೆಬರಹ ಇರುತ್ತದೆ. ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಬಗ್ಗೆ ನಾನು ಸಂತಸ ಪಡುತ್ತೇನೆ, ಅದನ್ನು ನನ್ನ ಹೆಗಲಮೇಲೆ ತೆಗೆದುಕೊಳ್ಳುತ್ತೇನೆ ಎಂದರೆ, ಸೋತ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ ಅವರು.

TV9 Kannada


Leave a Reply

Your email address will not be published. Required fields are marked *