ಲಂಡನ್: ಬ್ರಿಟನ್‌ನ ರಾಜಮನೆತನದ, ಸಸ್ಸೆಕ್ಸ್​ನ ರಾಜಕುಮಾರ ಪ್ರಿನ್ಸ್​ ಹ್ಯಾರಿ ಮತ್ತು ಮೇಘನ್  ದಂಪತಿಗೆ ಹೆಣ್ಣು ಮಗು ಜನನವಾಗಿದೆ.  ಲಂಡನ್ ಅರಮನೆಯ ಪತ್ರಿಕಾ ಕಾರ್ಯದರ್ಶಿ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಹ್ಯಾರಿ ದಂಪತಿಗೆ ಇದು ಎರಡನೇ ಮಗುವಾಗಿದ್ದು, ಕ್ಯಾಲಿಪೋರ್ನಿಯಾದ ಸಂತಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.40ಕ್ಕೆ ಮಗು ಜನಿಸಿದೆ. ಇನ್ನು ಈ ಮುದ್ದಾದ ಹೆಣ್ಣು ಮಗುವಿಗೆ  ಹ್ಯಾರಿಯ ತಾಯಿ ಡಯಾನಾ ಹಾಗೂ ಅಜ್ಜಿ ರಾಣಿ ಎಲಿಜಬೆತ್ ಅವರ ಹೆಸರನ್ನ ಸೇರಿಸಿ ಮಗುವಿಗೆ ಇಟ್ಟಿದ್ದಾರೆ. ಲಿಲ್ಲಿಬೆಟ್​ ಲಿಲ್ಲಿ ಡಯನಾ ಮೌಂಟ್​​ಬ್ಯಾಟನ್ ವಿಂಡ್ಸರ್​ ಅಂತ ನಾಮಕರಣ ಮಾಡಿದ್ದು, ಮಗಳ ಆಗಮನದಿಂದ ತುಂಬಾ ಸಂತೋಷವಾಗಿದೆ ಅಂತ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ತಿಳಿಸಿದ್ದಾರೆ.

 

View this post on Instagram

 

A post shared by The Royal Family (@theroyalfamily)

The post ಹ್ಯಾರಿ-ಮೇಘನ್​​ಗೆ ಹೆಣ್ಣುಮಗು ಜನನ.. ರಾಣಿ ಎಲಿಜಬೆತ್​, ಡಯಾನಾ ಹೆಸರು ಮಗುವಿಗೆ ನಾಮಕರಣ appeared first on News First Kannada.

Source: newsfirstlive.com

Source link