ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಇಂದಿನಿಂದ ಇಂದಿರಾ ಕ್ಯಾಂಟೀನ್​ನಲ್ಲಿ ದಿನದ ಮೂರು ಹೊತ್ತೂ ಫ್ರೀ ಊಟ ಪೂರೈಸುವುದಾಗಿ ಬಿಬಿಎಂಪಿ ಹೇಳಿದೆ.

ಬಡ ವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆಹಾರ ಪೊಟ್ಟಣಗಳ ಮೂಲಕ ಊಟ ಪೂರೈಕೆ ಮಾಡಲಾಗುತ್ತದೆ. ಇಂದಿನಿಂದ ಮೇ 24ರವರೆಗೆ ಮೂರೂ ಹೊತ್ತು ಆಹಾರ ಪೂರೈಕೆಯಾಗಲಿದೆ. ಗುರುತಿನ ಚೀಟಿ ತೋರಿಸಿ ಜನರು ಉಚಿತ ಊಟ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಹೇಳಿದೆ.

The post ​ ಇಂದಿನಿಂದ ಇಂದಿರಾ ಕ್ಯಾಂಟೀನ್​ನಲ್ಲಿ 3 ಹೊತ್ತು ಫ್ರೀ ಊಟ appeared first on News First Kannada.

Source: newsfirstlive.com

Source link