ಉಡುಪಿ: ನಂದಿಕೂರಿನ ಆಯುಷ್ ಬಯೋ ಮೆಟ್ರಿಕ್ ವೇಸ್ಟ್ ನಿರ್ವಹಣಾ ಘಟಕದಲ್ಲಿ ಸುಮಾರು 1.28 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸೇರಿದಂತೆ ಮತ್ತಿತರ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು.

 

ಈ ಸಂದರ್ಭದಲ್ಲಿ ಮಾತಾಡಿದ ಉಡುಪಿ ಎಸ್ ಪಿ ವಿಷ್ಣುವರ್ಧನ್.. 2008ರಿಂದ 2021ರವರೆಗಿನ ಎಲ್ಲಾ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಪ್ರತೀ ವರ್ಷವೂ ಈ ದಿನವನ್ನ ಮಾದಕ ದ್ರವ್ಯ ವಿರೋಧಿ ಹಾಗೂ ಅವುಗಳ ಕಳ್ಳಸಾಗಣೆ ವಿರೋಧಿ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಎಲ್ಲಾ ಮಾದಕ ದ್ರವ್ಯವ್ಯಸನಿಗಳು ಮತ್ತು ಕಳ್ಳಸಾಗಣೆದಾರರ ಮೇಲೆ ಇಲಾಖೆ ನಿಗಾ ಇಟ್ಟಿದೆ ಎಂದರು.

The post ₹1.28 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಮಂಗಳೂರು ಪೊಲೀಸ್ appeared first on News First Kannada.

Source: newsfirstlive.com

Source link