ಬೆಂಗಳೂರು: ಅದು ಪಕ್ಕಾ ದೇಶದ್ರೋಹಿ ಗ್ಯಾಂಗ್‌. ಬೆಂಗಳೂರಿನಲ್ಲೇ ಕೂತು ಇಂಟರ್ ನ್ಯಾಷನಲ್ ಫೋನ್​ ಕಾಲ್​​ಗಳನ್ನ ಕನ್ವರ್ಟ್ ಮಾಡ್ತಿದಿದ್ದಲ್ಲದೇ, ದೇಶದ ಆಂತರಿಕ ಭದ್ರತೆಯನ್ನೆ ಹಾಳುಗೆಡುವ ಕೃತ್ಯಕ್ಕೆ ಮುಂದಾಗಿದ್ರು. ಸದ್ಯ ಬೆಂಗಳೂರು ಪೊಲೀಸರ ಖೆಡ್ಡಾದಲ್ಲಿರೋ ಖರ್ತನಾಕ್​ಗಳಿಗೆ ಚಳಿಬಿಡಿಸಲು ರಾಷ್ಟ್ರೀಯ ತನಿಖಾ ದಳ ಮುಂದಾಗಿದೆ.

ಅಂತರಾಷ್ಟ್ರೀಯ ಕರೆಗಳನ್ನ ಸ್ಥಳಿಯ ಕರೆಗಳನ್ನಾಗಿ ಕನ್ವರ್ಟ್ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಕಳೆದ ಜೂನ್ 9 ರಂದು ಬೆಂಗಳೂರಿನ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು. ಬಿಟಿಎಂ ಲೇಔಟ್ನ ಆರು ಕಡೆ ದಾಳಿ ನಡೆಸಿದ್ದ ಸಿಸಿಬಿ, ಕೇರಳ ಮೂಲದ ಇಬ್ರಾಹಿಂ ಹಾಗೂ ತಮಿಳುನಾಡು ಮೂಲದ ಗೌತಮ್ ಎಂಬಿಬ್ಬರನ್ನ ಬಂಧಿಸಿತ್ತು.

ಬಂಧಿತ ಆರೋಪಿಗಳಿಗಿದ್ಯಾ ಪಾಕ್ ನಂಟು?
ಬಂಧಿತ ಆರೋಪಿಗಳು ಕೊರಿಯರ್ ಮೂಲಕ ಪ್ರೀ ಆಕ್ಟಿವೇಟೆಡ್ ಸಿಮ್​ಗಳನ್ನ ಕೇರಳ, ಆಂಧ್ರ, ತಮಿಳುನಾಡು ಮೂಲಕ ಬೆಂಗಳೂರಿಗೆ ತರಿಸುತ್ತಿದ್ರು ಅನ್ನೋದು ವಿಚಾರಣೆ ವೇಳೆ ಗೊತ್ತಾಗಿದೆ. ಅಲ್ಲದೇ ಇಂಟರ್ ನ್ಯಾಷನಲ್ ಕಾಲ್ಸ್​ ರೂಪದಲ್ಲಿ ಬರ್ತಿದ್ದ ಅಪರಿಚಿತ ಕರೆಗಳಲ್ಲಿ ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಬಗ್ಗೆ ಚರ್ಚೆ ಆಗಿತ್ತು. ಈಶಾನ್ಯ ರಾಜ್ಯದ ಸೇನಾ ನೆಲೆಗಳಿಗೆ ಅಪರಿಚಿತ ಸಂಖ್ಯೆಯಿಂದ ಬರ್ತಿದ್ದ ಫೋನ್ ಕಾಲ್​​​ಗಳು ಸೇನಾ ಅಧಿಕಾರಿಗಳ ಹೆಸರಲ್ಲಿ ಮಾಹಿತಿ ಕಲೆ ಹಾಕಲಿಕ್ಕೆ ಮುಂದಾಗಿದ್ವು. ಈ ಕುರಿತಾದ ಹಲವು ಮಹತ್ವದ ವಿಚಾರಗಳು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬಂಧಿತರ ಬಗ್ಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರು ಪೊಲೀಸರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಸಿಸಿಬಿಯಿಂದ ಇತರೆ ಆರೋಪಿಗಳಿಗಾಗಿ ತಲಾಶ್
ಸದ್ಯ ಪ್ರಕರಣದಲ್ಲಿ ಬಂಧಿತರಾಗಿರೋ ಇಬ್ರಾಹಿಂ ಮತ್ತು ಗೌತಮ್ನಿಂದ ಇತರೆ ಆರೋಪಿಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕ್ತಿದೆ. ಆರೋಪಿ ಇಬ್ರಾಹಿಂ ಬೆಂಗಳೂರಿನಲ್ಲಿ ನಕಲಿ ಸರ್ವರ್​​ಗಳನ್ನ ಬಳಸುತ್ತಿದ್ದು, ಈತನಿಗೆ ದುಬೈ ನೆಟ್​ವರ್ಕ್ ಇರೋದು ಗೊತ್ತಾಗಿದೆ. ಅಲ್ಲದೇ ಇಬ್ರಾಹಿಂ ಬಳಸುತ್ತಿದ್ದ ಪ್ರೀ ಆ್ಯಕ್ಟಿವೇಟೆಡ್ ಸಿಮ್ ನಂಬರ್ಗಳ ಮೂಲಕ ಪಾಕ್ ಇಂಟೆಲಿಜೆನ್ಸ್ ನಿಂದ ಭಾರತೀಯ ಸೇನಾ ನೆಲೆಗಳಿಗೆ ಕರೆ ಮಾಡಿರೋ ಸಾಧ್ಯತೆಗಳಿವೆ. ಈ ಮೂಲಕ ದೇಶದ ಆಂತರಿಕ ಭದ್ರತೆಗೆ ಸಂಬಂಧಪಟ್ಟಂತೆ ಹಲವು ಮಹತ್ವದ ವಿಚಾರಗಳು ಸೋರಿಕೆಯಾಗಿರೋ ಶಂಕೆಯನ್ನ ಎನ್​​ಐಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೇಶದ ಭದ್ರತೆಗೆ ಗಂಡಾಂತರ: ₹10ರ ISD ಕಾಲ್ 10 ಪೈಸೆಗೆ ಕನ್ವರ್ಟ್ ಮಾಡ್ತಿದ್ದ ಮಹಾಜಾಲ ಬಯಲು

ಈ ಹಿಂದೆ ಡಿ.ಜೆ ಹಳ್ಳಿ ಕೆ.ಜಿಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ 410 ಮಂದಿ ಆರೋಪಿಗಳ ಪೈಕಿ 9 ಮಂದಿ ಶಂಕಿತ ಭಯೋತ್ಪಾದಕರ ಜೊತೆ ನಂಟನ್ನ ಹೊಂದಿದ್ರು. ಶಂಕಿತರಿಗೆ ಬೆಂಗಳೂರಲ್ಲಿ ಆಶ್ರಯವನ್ನ ಕೊಡೋದು, ಹಣಕಾಸಿನ ಸಹಾಯವನ್ನ ಮಾಡೋದು, ಬಳಸಲಿಕ್ಕೆ ಮೊಬೈಲ್ ಕೊಡೋ ಕೆಲಸವನ್ನ ಮಾಡ್ತಿದ್ರು. ಅದೇ ರೀತಿ ಇಬ್ರಾಹಿಂಗೆ ಇಂಟರ್ ನ್ಯಾಷನಲ್ ಕಾಲ್ಸ್ ಡೈವರ್ಟ್ ಮಾಡುತ್ತಿದ್ದರಿಂದ ಪ್ರತಿ ತಿಂಗಳಿಗೆ 15 ರಿಂದ 20 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಇಬ್ರಾಹಿಂನ ಹಣದ ಮೂಲ ಹಾಗೂ ಆತನ ಬೆನ್ನಿಗೆ ನಿಂತಿದ್ದ ಬಾಹ್ಯ ಶಕ್ತಿಗಳ ಬಗ್ಗೆ ತಲಾಶ್ ಗೆ ಸಿಸಿಬಿ ಪೊಲೀಸರು ಹಾಗೂ ಎನ್​​ಐಎ ಅಧಿಕಾರಿಗಳು ಮುಂದಾಗಿದ್ದಾರೆ.

The post ₹10ರ ISD ಕಾಲ್ 10 ಪೈಸೆಗೆ ಕನ್ವರ್ಟ್ ಮಾಡ್ತಿದ್ದ ಕೇಸ್ -ತನಿಖೆಗೆ NIA ಎಂಟ್ರಿ appeared first on News First Kannada.

Source: newsfirstlive.com

Source link