ಹಾಸನ: ಅರಸೀಕೆರೆ ನಗರಸಭೆ ಜೆಡಿಎಸ್​ ಸದಸ್ಯರಿಗೆ ಬಿಜೆಪಿ ಹಣದ ಆಮೀಷವೊಡ್ಡಿದೆ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜೆಡಿಎಸ್​ ಹೆಚ್​ಡಿ ರೇವಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ನಗರಸಭೆ ಸದಸ್ಯರೊಬ್ಬರ ಮನೆಯಲ್ಲಿ 10 ಲಕ್ಷ ರೂಪಾಯಿ ಇಟ್ಟು ಹೋಗಿದ್ದಾರೆ ಎನ್ನಲಾಗಿರುವ ಹಣವನ್ನ ಮಾಧ್ಯಮಗಳಿಗೆ ಪ್ರದರ್ಶನ ಮಾಡಿದ್ರು.

ಬಳಿಕ ಮಾತನಾಡಿದ ರೇವಣ್ಣ.. ಅರಸಿಕೆರೆ ಪುರಸಭೆಯಲ್ಲಿ ಮೆಜಾರಿಟಿ ಪಡೆದುಕೊಳ್ಳಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಹಣದ ಆಮಿಷವೊಡ್ಡಿದ್ದಾರೆ. ಬಿಜೆಪಿ‌ ಪಕ್ಷಕ್ಕೆ ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗರು ಹಣವನ್ನ ನೀಡಿ ಹೋಗಿದ್ದಾರೆ ಎಂದು ಆರೋಪಿಸಿದರು. ಎರಡನೇ ವಾರ್ಡ್​ನ ನಗರಸಭೆ ಸದಸ್ಯೆ ಕಲೈರಸಿಗೆ ಹತ್ತು ಲಕ್ಷ ಹಣ ಸಂತೋಷ್ ನೀಡಿದ್ದಾರೆ. ಈಗ ಹತ್ತು ಲಕ್ಷ ಕೊಟ್ಟಿದ್ದಾರೆ, ಬಂದ ನಂತರ ಹದಿನೈದು‌ ಲಕ್ಷ ಕೊಡುತ್ತೇವೆ ಎಂದು ಸಂತೋಷ್ ಹೇಳಿದ್ದಾರೆ ಎಂದು ಗಂಭೀರ ಆರೋಪವನ್ನ ರೇವಣ್ಣ ಗಂಭೀರ ಮಾಡಿದ್ದಾರೆ.

ಬೇಡ ಅಂದ್ರು ಬಿಟ್ಟು ಹೋಗಿದ್ದಾರೆ
ಇದೇ ವೇಳೆ ಮಾತನಾಡಿದ ಪುರಸಭೆ ಸದಸ್ಯೆರೊಬ್ಬರು.. 6 ರಿಂದ 7 ಜನ ಬಿಜೆಪಿಗೆ ಬಂದರೆ ಇಷ್ಟು ಅಮೌಂಟ್ ಕೊಡ್ತೀನಿ ಅಂತಾ ಮೊದಲು ಹೇಳಿದ್ರು. ಮಿಕ್ಕಿದ್ದು ಜಾಸ್ತಿ ಬೇಕು ಅಂದ್ರೆ ನಾವು ಅರೆಂಜ್ ಮಾಡ್ತೀವಿ ಅಂತಾ ಹೇಳಿದ್ರು. ನಮ್ಮ ಪಕ್ಷಕ್ಕೆ ಬಂದು ಬಿಡಿ, ನೀವೂ ಬಂದು ಬಿಡಿ ಅಂತಾ ಹೇಳಿದ್ದರು. ಅದಕ್ಕೆ ನಾವು ಹೇಳಿದ್ವಿ. ಇಲ್ಲ ನಾವು ಇರೋದು ಜೆಡಿಎಸ್​, ಜೆಡಿಎಸ್​​ ಬಿಟ್ಟು ಎಲ್ಲಿಗೂ ಹೋಗಲ್ಲ ನಾವು ಅಂದ್ವಿ. ಆದರೆ ನಿನ್ನೆ ರಾತ್ರಿ 10 ಲಕ್ಷ ಹಣವನ್ನ ಕೊಟ್ಟು ಹೋಗಿದ್ದಾರೆ, ಬೇಡ ಅಂದರೂ ಇವರ ಮನೆಯಲ್ಲಿ ಇಟ್ಟು ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್​ನಿಂದ ಬಿಟ್ಟು ಬರಲ್ಲ ಅಂತಾ ಹೇಳಿದ ಮೇಲೆ ಈ ಹಣವನ್ನ ಮನೆಯಲ್ಲಿ ಇಟ್ಟು ಹೋಗಿದ್ದಾರೆ ಎಂದು ಆರೋಪ ಮಾಡಿದರು.

The post ₹10 ಲಕ್ಷ ಹಣ ಮುಂದಿಟ್ಟು ಇದು ‘ಆಪರೇಷನ್ ಕಮಲ’ದ್ದು ಎಂದು ರೇವಣ್ಣ ಗಂಭೀರ ಆರೋಪ appeared first on News First Kannada.

Source: newsfirstlive.com

Source link