ಜಸ್ಟ್ 15 ಸಾವಿರ ಇನ್ವೆಸ್ಟ್ ಮಾಡಿದ್ರೆ ಈ ವರ್ಷದ ಡಿಸೆಂಬರ್ ತಿಂಗಳಷ್ಟೋತ್ತಿಗೆ ಒಂದು ಲಕ್ಷ ಬರುತ್ತೆ. ಧಾಮ್ ಧೂಮ್ ಅಂತ ಹ್ಯಾಪಿ ನ್ಯೂಇಯರ್ ಮಾಡಬಹುದು. ಅದೇ ಹದಿನೈದು ಸಾವಿರ ಇನ್ವೆಸ್ಟ್ ಮಾಡಿ ಎರಡು ಸಾವಿರದ ಇಪ್ಪತೆರಡರ ತನಕ ವೇಟ್ ಮಾಡಿದ್ರೆ ಐದು ಲಕ್ಷ ಸಂಪಾದಿಸ ಬಹುದು. ಒಂದು ವೇಳೆ 2023ರ ತನಕ ತಡೆದುಕೊಂಡ್ರೆ 12 ಲಕ್ಷ. 2025ರ ಹೊತ್ತಿಗೆ 25 ಲಕ್ಷ. ಆಕಸ್ಮಾತ್​​​​ ಒಂದು ಲಕ್ಷ ಈ ಬ್ಯುಸಿನೆಸ್​​ನಲ್ಲಿ ಹೂಡಿಕೆ ಮಾಡಿದ್ರೆ ಒಂದೇ ವರ್ಷಕ್ಕೆ ಮೂರು ಕೋಟಿ. ಯಾರಿಗುಂಟು ಯಾರಿಗಿಲ್ಲ? ಈ ರೀತಿಯ ಲಾಭ ಬರೋ ಬ್ಯುಸಿನೆಸ್ ಎಲ್ಲಾದ್ರೂ ಈ ಭೂಮಿ ಮೇಲೆ ಇದ್ಯ? ಚಾನ್ಸೇ ಇಲ್ಲ ಅಲ್ವಾ.. ಒಂದು ವೇಳೆ ಇದ್ದರು ಅದು ಲೀಗಲ್ ಬ್ಯುಸ್​ನೆಸ್ ಆಗಿರೋದಕ್ಕೆ ಸಾಧ್ಯನೂ ಇಲ್ಲ. ಇದು ಮಿಡ್ ನೈಟ್​ ಕಾಣೋ ಬಾವಿಗೆ ಬೆಳ್​ ಬೆಳಗ್ಗೇನೇ ಬಿದ್ದಿರೋರ ಕಥೆ . ಬರೋಬ್ಬರಿ 2000 ಸಾವಿರಕ್ಕೂ ಹೆಚ್ಚು ಮಂದಿ ದುರಾಸೆಗೆ ಬಿದ್ದು ಪಂಗನಾಮವನ್ನ ಎಳೆದುಕೊಂಡ ಕಥೆ.

ಚೈನ್ ಲಿಂಕ್ ಜಾಲಕ್ಕೆ ಸಿಲುಕುತ್ತಿದ್ದಾರೆ ಅಮಾಯಕರು!
ಇದು ಆನ್ ಲೈನ್ ಜಮಾನ ಸ್ವಾಮಿ ಅಂಗೈಯಲ್ಲೇ ಅತಳ ವಿತಳ ಸುತಾಳ ಪಾತಳವೂ ಕಾಣುತ್ತೆ.  ಈ ಕೊರೊನಾ ಕಾಲದಲ್ಲಿ ವರ್ಕ್ ಫರ್ಮ್ ಹೋಮ್ ನೆಪದಲ್ಲಿ ಮನೆಯಲ್ಲಿ ಅಥವಾ ಎಲ್ಲೋ ಒಂದು ಕಡೆ ಕುಳಿತು ಕೆಲಸ ಮಾಡೋದು ರೂಢಿಗೆ ಬಂದಿದೆ. ಆದ್ರೆ ಕಾಣದ ಕಳ್ಳರು ಕೊರೊನಾ ಕಾಲಕ್ಕಿಂತ ಮುಂಚೆಯೇ ವರ್ಕ್ ಫರ್ಮ್ ಹೋಮ್ ಕಾನ್ಸೆಪ್ಟ್ ಕಂಡು ಹಿಡಿದುಕೊಂಡು ಕಾಣದಂತೆ ಯಾಮಾರಿಸಿ ಮರೆಯಾಗುತ್ತಿದ್ದರು. ಮೊದಲೆ ಜನಕ್ಕೆ ಈ ಕೊರೊನಾ ಕಾಲದಲ್ಲಿ ಸರಿಯಾಗಿ ಕೆಲಸವಿಲ್ಲ. ಯಾವುದಾದ್ರೊಂದು ದಿಕ್ಕಿನಿಂದ ಏನಾದ್ರು ಪವಾಡವಾಗಿ ಕೆಲಸ ಕಾರ್ಯ ಸಿಗುತ್ತಾ ಅಂತ ಆಕಾಶ ನೋಡ್ತಿದ್ದಾರೆ. ಇಂತಹ ಟೈಮ್​​ ಅನ್ನ ಕೆಲವರು ಎನ್​​ಕ್ಯಾಶ್​ ಮಾಡ್ಕೊಂಡು ಕೋಟಿ ಕೋಟಿ ವಂಚನೆ ಮಾಡ್ತಿದ್ದಾರೆ. ಅದೇ ರೀತಿ ವಂಚನೆಯ ಪ್ರಕರಣವೊಂದು ಸಿಲಿಕಾನ್​ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಅದೇ ಚೈನ್ ಲಿಂಕ್ ಕಂಪನಿಯೊಂದರ ಮಹಾ ವಂಚನೆ.

ಸಿಸಿಬಿಯಿಂದ ಬಯಲಾಯ್ತು ದೋಖಾ ಕಂಪನಿ
ಆಫೀಸು ತೆರೆಯದೇ ಆಫೀಶಿಯಲ್ ಆಗಿ ಆನ್​​ಲೈನ್​​ನಲ್ಲಿ ವಂಚನೆ ಮಾಡಿರುವ ದೋಖಾ ಕಹಾನಿ ಸಿಸಿಬಿ ತನಿಖೆಯಿಂದ ಬಯಲಾಗಿದೆ. ಒಬ್ಬರಲ್ಲಿ ಇಬ್ಬರಲ್ಲ ಬರೋಬ್ಬರಿ 2 ಸಾವಿರ ಮಂದಿ ಕೋಟಿ ಕೋಟಿ ಹಣ ಕಳೆದುಕೊಂಡು ವಂಚನೆಗೊಳಗಾಗಿರುವ ಆರೋಪ ಕೇಳಿಬಂದಿದೆ. ಸಿಸಿಬಿ ಪೊಲೀಸರ ಸಮಯ ಪ್ರಜ್ಞಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಡಿಜಿಟೆಕ್ ಮಾರ್ಕ್ ಎಂಬ ಕಂಪನಿ ವಿರುದ್ದ ಎಫ್​ಐಆರ್ ದಾಖಲಿಸಿಕೊಂಡು ಡಿ.ಎಸ್​.ರಂಗನಾಥ್ ಎಂಬಾತನನ್ನ ಬಲೆಗೆ ಬಿಳಿಸಿಕೊಂಡು ಶೋಧ ಕಾರ್ಯವನ್ನ ಪ್ರಾರಂಭಿಸಿದ್ದಾರೆ.

ಏನಿದು ಚೈನ್ ಲಿಂಕ್ ಪ್ರಕರಣ ?
ಡಿಜಿಟೆಕ್ ಎಂಬ ಕಂಪನಿ ಕಚೇರಿಯನ್ನ ತೆರೆಯದೆ ಆನ್​​​ಲೈನ್​​ನಲ್ಲೆ 2000 ಜನರನ್ನ ಬುಟ್ಟಿಗೆ ಹಾಕಿಕೊಂಡು ಯಾಮಾರಿಸಿದೆ. ಆರೋಪಿಗಳು 25 ಪರಸೆಂಟ್ ಲಾಭದ ಆಮಿಷ ಒಡ್ಡಿ ಆನ್​​ಲೈನ್​​ನಲ್ಲಿ ಜನರನ್ನ ಸೆಳೆಯುತ್ತಿದ್ದರು. ಬ್ಯುಸ್​ನೆಸ್ ಎಂದು ಹೇಳಿ 15 ಸಾವಿರ ರೂಪಾಯಿ ಪಡೆದು ಒಂದು ಲಕ್ಷ ಲಾಭ ಕೊಡ್ತಿವಿ ಅಂತ ನಂಬಿಸಿದ್ದರು. ಆದ್ರೆ ಇದು ಪಕ್ಕಾ ವಂಚನೆ ಎಂದು ತಿಳಿದ ಸಿಸಿಬಿ ಪೊಲೀಸರು ಸ್ವಯಂ ದೂರನ್ನ ದಾಖಲಿಸಿಕೊಂಡು ಡಿಜಿಟೆಕ್ ಕಂಪನಿ ವಿರುದ್ಧ ಎಫ್​ಐಆರ್ ಹಾಕಿ ಡಿ.ಎಸ್​.ರಂಗನಾಥ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಾವು ಮೊದಲೇ ಹೇಳಿದೆ ಹಾಗೆ ಡಿಜಿಟೆಕ್ ಕಂಪನಿ 15 ಸಾವಿರಕ್ಕೆ ಒಂದು ಸದಸ್ಯತ್ವ. ಸದಸ್ಯತ್ವ ಪಡೆದವರಿಗೆ ಒಂದು ವರ್ಷ ಕಳೆಯುವಷ್ಟರಲ್ಲಿ 1 ಲಕ್ಷ. ಎರಡು ವರ್ಷ ಕಳೆದ್ರೆ 5 ಲಕ್ಷ.. ಮೂರು ವರ್ಷ ಕಳೆದ್ರೆ 12 ಲಕ್ಷ .. ಐದು ವರ್ಷ ಕಳೆದ್ರೆ ಬರೋಬ್ಬರಿ 25 ಲಕ್ಷ.. ಒಂದು ವೇಳೆ ಒಂದು ಲಕ್ಷ ರೂಪಾಯಿ ಹಣವನ್ನ ಈ ತಲೆಬುಡ ಇಲ್ಲದ ಬ್ಯುಸ್​ನೆಸ್​​ಗೆ ಹಾಕಿಬಿಟ್ರೆ ಐದೇ ವರ್ಷಕ್ಕೆ ಮೂರು ಕೋಟಿ ಲಾಭ ಕೊಡೋದಾಗಿ ನಂಬಿಸಿತ್ತು. ಸದಸ್ಯತ್ವ ಪಡೆದ ವ್ಯಕ್ತಿಗೆ ಯೂಸರ್ ನೇಮ್ , ಪಾಸ್ ವರ್ಡ್ ನೀಡಿ ಏಜೆಂಟ್​ರನ್ನಾಗಿ ಮಾಡಲಾಗ್ತಿತ್ತು. ಆನಂತರ ಸದಸ್ಯನ ಎಡ ಬಲ ಸದಸ್ಯರನ್ನ ನೋಂದಾಯಿಸಿದರೆ 25 ಪರ್ಸೆಂಟ್​ ಲಾಭ ಕೋಡೋದಾಗಿ ಆಶ್ವಾಸನೆ.. ಕೆಲಸ ಮಾಡಿದ್ರು, ಮಾಡದಿದ್ದರು ಒಟ್ಟಿನಲ್ಲಿ ದುಡ್ಡು ಬಂದೇ ಬರುತ್ತೆ ಎಂದು ನಂಬಿಸಿ ಕೋಟಿ ಕೋಟಿ ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ.

ಕಣ್ಣ್ ಮುಚ್ಚಿಕೊಂಡು ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಅನ್ನೋದು ಬೆಕ್ಕಿಗೆ ಇರೋ ನಂಬಿಕೆ. ಆದ್ರೆ ಸಿಸಿಬಿ ಪೊಲೀಸರು ಇಂತಹ ಎಷ್ಟು ದೋಖಾಧಾರಿಗಳನ್ನ ನೋಡಿಲ್ಲ ಹೇಳಿ.? ಅಷ್ಟಕ್ಕೂ ಈ ಕೋಟಿ ಕೋಟಿ ಹಣ ಜನ ಸಾಮಾನ್ಯರಿಂದ ಮೋಸ ಹೋಗಿದ್ದು ಹೇಗೆ.? ಜೊತೆ ಈ ಕಾಣದ ಕಳ್ಳ ಕೈಗಳು ಸಿಸಿಬಿ ಬಲೆಗೆ ಬಿದ್ದಿದ್ದು ಹೇಗೆ ಅನ್ನೋದೇ ಇಂಟರ್​ಸ್ಟಿಂಗ್.

ಕ್ರಿಪ್ಟೋದಲ್ಲಿ ಹೂಡಿಕೆ ಮಾಡುತ್ತಿರುವಾಗ ಸುಳಿವು
ಕ್ರಿಪ್ಟೋ ಟ್ರೋನ್​ ಕಾಯಿನ್​ಗೆ ಜನರ ಹಣ ಹೂಡಿಕೆ

ಆರೋಪಿ ಡಿ.ಎಸ್ ರಂಗನಾಥ್ ಜನರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂಪಾಯಿ ಹಣವನ್ನ ಕ್ರಿಪ್ಟೋ ಕರೆನ್ಸಿಯಾದ ಟ್ರೋನ್ ಕಾಯಿನ್​​​ನಲ್ಲಿ ಹೂಡಿಕೆ ಮಾಡುತ್ತಿದ್ದ. ಆನಂತರ ತನ್ನ ಕಂಪನಿ ಹೆಸರಿನಲ್ಲಿಯೇ ಡಿಟಿಎಂ ಟೋಕನ್ ಎಂದು ರೂಪಿಸಿ ಹೂಡಿಕೆದಾರರಿಗೆ ಕೊಟ್ಟು ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ. ಈಗ ಆರೋಪಿಯ ಬ್ಯಾಂಕ್ ಖಾತೆ ವಿವರ ಮತ್ತು ಚರಾಸ್ತಿ, ಸ್ಥಿರಾಸ್ತಿ ಜಪ್ತಿ ಮಾಡುವತ್ತ ಅಧಿಕಾರಿಗಳು ಕಾರ್ಯಚರಣೆ ಮಾಡುತ್ತಿದ್ದಾರೆ.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಯಾರೇ ತಪ್ಪು ಮಾಡಿರಲಿ ಎಲ್ಲಾದ್ರೊಂದು ಕ್ಲೂ ಬಿಟ್ಟೇ ಬಿಟ್ಟಿರುತ್ತಾರೆ. ಅದರಂತೆ ಡಿಜಿಟೆಕ್ ಮಾರ್ಕ್​​​ ಕಂಪನಿಯ ಡಿ.ಎಸ್​.ರಂಗನಾಥ್ ಬ್ಯಾಂಕ್ ಟ್ರಾನ್ಸಾಕ್ಷನ್​​​ನಿಂದ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಆರೋಪಿ ಜನರಿಂದ ಬಂದ ಬಂಡವಾಳವನ್ನ ಹೇಗೆ ಉಪಯೋಗಿಸಿಕೊಂಡು ಯಾಮಾರಿಸಲು ಮುಂದಾಗಿದ್ದ ನೋಡಿ. ಈ ರೀತಿಯ ಚೈನ್ ಲಿಂಕ್ ಪ್ರಕರಣಗಳು ಆಗಾಗ ಬಯಲಾಗುತ್ತಲೇ ಇವೆ. ಇನ್ನಾದ್ರು ಜನ ಎಚ್ಚೆದುಕೊಳ್ಳಬೇಕಿದೆ.

The post ₹15,000ಕ್ಕೆ ₹1 ಲಕ್ಷ ಲಾಭ ಕೊಡ್ತೀವೆಂದು ಆನ್​​ಲೈನ್ ಕಂಪನಿ ದೋಖಾ.. 2000 ಜನರಿಗೆ ಉಂಡೆನಾಮ appeared first on News First Kannada.

Source: newsfirstlive.com

Source link