ಬೆಂಗಳೂರು: ಭದ್ರಾ ಮತ್ತು ಕಾವೇರಿ ನೀರಾವರಿ ಯೋಜನೆ 20,000 ಕೋಟಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗಿದೆ. ಆದರೆ ಸರ್ಕಾರದಲ್ಲಿ ದುಡ್ಡೇ ಇಲ್ಲ. ಆದರೂ ಟೆಂಡರ್ ಕೊಟ್ಟು ಕಿಕ್ ಬ್ಯಾಕ್ ಪಡೆದು ಹೋಗುವ ಪ್ಲ್ಯಾನ್ ವಿಜಯೇಂದ್ರನದ್ದು ಎಂದು ಪರಿಷತ್ ಸದಸ್ಯ ಹೆಚ್​​​.ವಿಶ್ವನಾಥ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್​​​.ವಿಶ್ವನಾಥ್​, ನೀರಾವರಿ ಯೋಜನೆಯ ಪೈಕಿ ಅಕ್ರಮ ಬಗ್ಗೆ ದಾಖಲಾತಿ ಇದೆ. ಭದ್ರಾ ಮತ್ತು ಕಾವೇರಿ ನೀರಾವರಿ ಯೋಜನೆ 20,000 ಕೋಟಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗಿದೆ. ಆದರೆ ಸರ್ಕಾರದಲ್ಲಿ ದುಡ್ಡೇ ಇಲ್ಲ. ಆದರೂ ಟೆಂಡರ್ ಕೊಟ್ಟು ಕಿಕ್ ಬ್ಯಾಕ್ ಪಡೆದು ಹೋಗುವ ಪ್ಲ್ಯಾನ್ ವಿಜಯೇಂದ್ರನದ್ದು. ಎಲ್ಲಾ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ವಿಚಾರ ಇಡೀ ರಾಜ್ಯದ ಜನತೆಗೆ, ಸಚಿವರಿಗೆ ಗೊತ್ತು ಎಂದು ಟೆಂಡರ್​ ಪ್ರಕ್ರಿಯೆಯ ದಾಖಲೆಗಳನ್ನು ಬಿಡುಗಡೆ ಮಾಡಿದರು. ಇದಕ್ಕೆ ಯಾವುದೇ ಸಭೆ ನಡೆಸಿಲ್ಲ. ಆರ್ಥಿಕ ಇಲಾಖೆಯಿಂದ ಕ್ಲಿಯರೆನ್ಸ್ ಕೂಡ ತಗೊಂಡಿಲ್ಲ ಎಂದು ಆರೋಪಿಸಿದರು.

ಬಿಎಸ್​​ವೈ 2ನೇ ಸಲ ಎಲ್ಲಿ ಜೈಲಿಗೆ ಹೋಗ್ತಾರೋ ಅಂತ ಆತಂಕ
ಮನೆಯವರಿಂದಲೇ ಸಿಎಂ ಬಿಎಸ್​​ವೈ ಜೈಲಿಗೆ ಹೋಗಿದ್ದರು. ಆದರೆ ಈಗ ಮತ್ತೊಮ್ಮೆ ಅವರು ಜೈಲಿಗೆ ಹೋಗುತ್ತಾರೋ ಎಂಬ ಆತಂಕ ನಮಗೆ ಇದೆ. ಆದ್ದರಿಂದ ಸರ್ಕಾರ ಪಕ್ಷ ಹಾಗೂ ಜನತೆಗೆ ಸಂಬಂಧಿಸಿದ್ದು, ಕುಟುಂಬಕ್ಕೆ ಸಂಬಂಧಿಸಿದಲ್ಲ. ಆದ್ದರಿಂದಲೇ ಇವತ್ತು ಸಂಪೂರ್ಣವಾಗಿ ಎಲ್ಲಾ ವಿಚಾರಗಳನ್ನು ಅರುಣ್​​ ಸಿಂಗ್​ಗೆ ಹೇಳಿದ್ದೇವೆ.

ಈಶ್ವರಪ್ಪ ರಾಜ್ಯಪಾಲರ ಬಳಿ ಹೋಗಿದ್ಯಾಕೆ? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ. ಹೇಳುವಂತಹ ಧೈರ್ಯ ಯಾರಿಗೂ ಇಲ್ಲ. ಒಬ್ಬೊಬ್ಬರನ್ನೇ ಮಾತನಾಡಿಸಿ ಬೇಕಾದ್ರೆ ಕಷ್ಟ ಹೇಳಿಕೊಳ್ಳುತ್ತಾರೆ. ಏನೋ ಸಚಿವ ಸ್ಥಾನ ಸಿಕ್ಕಿದೆ ಅಂತಾ ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದಾರೆ ಅಷ್ಟೇ.
ನನ್ನ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಅಂತಾ ಹೇಳಲಾಗುತ್ತಿದೆ. ಅವಶ್ಯವಾಗಿ ತೆಗೆದುಕೊಳ್ಳಲಿ. ನಾನು ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿಲ್ಲ. ಈಗ ನನ್ನ ವಿರುದ್ಧ ಮಾತಾಡುವವರು ಅವರ ಬಗ್ಗೆ ತಿಳಿದುಕೊಳ್ಳಲಿ.

ಜಯಲಕ್ಷ್ಮಿ ಗಂಡನಿಗೆ ನೈತಿಕತೆ ಇದೆಯಾ..?
ರೇಣುಕಾಚಾರ್ಯ ಫ್ಯೂರ್ ಬಿಜೆಪಿ ಅಲ್ಲ. ಕೆಜೆಪಿಯಿಂದ ಬಂದವನು. ಯಡಿಯೂರಪ್ಪ ವಿರುದ್ಧ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಹೈದರಾಬಾದ್​ಗೆ ಹೋಗಿದ್ದರು. ಆದರೆ ಅವರನ್ನು ಆ ಬಳಿಕ ಮಂತ್ರಿಗಿರಿಯಿಂದ ಇಳಿಸಿದ್ದು ಯಾಕೆ..? ಹಾಲಪ್ಪ ಏನು ಅಂತಾ ಎಲ್ಲರಿಗೂ ಗೊತ್ತಿದೆ. ಎಸ್.ಆರ್.ವಿಶ್ವನಾಥ್ ಏನೇನೋ ಮಾತಾಡುತ್ತಿದ್ದಾರೆ. ಹುಚ್ಚ ಅರೆಹುಚ್ಚ ಅಂತಾರೆ. ಈ ಹುಚ್ಚರಿಂದಲೇ ನೀನು ಇವತ್ತು ಬಿಡಿಎ ಅಧ್ಯಕ್ಷನಾಗಿರೋದು. ಮೂರು ಪಕ್ಷಗಳು ಸೇರಿ ಅಧಿಕಾರ ನಡೆಸುತ್ತಿವೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದು ನಿಜವಾಗಿದೆ. ಜಿಂದಾಲ್ ವಿಚಾರದಲ್ಲಿ ಎಲ್ಲರೂ ಯಾಕೆ ಸುಮ್ಮನಿದ್ದಾರೆ. ನಿನ್ನೆ ಅರುಣ್‌ಸಿಂಗ್ ಅವರನ್ನು ಭೇಟಿಯಾದ 80% ರಷ್ಟು ಮಂದಿ ನಾಯಕತ್ವ ಬದಲಾವಣೆ ಬೇಕು ಎಂದಿದ್ದಾರೆ. ಆದರೆ ಹೊರಗೆ ಬಂದು ಹೇಳುವ ಧೈರ್ಯ ಯಾರಿಗೂ ಇಲ್ಲ.

ನಾನು‌ ನಿನ್ನೆ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದ ಆಡಳಿತದ ವೈಖರಿ ಬಗ್ಗೆ ಸವಿಸ್ತಾರವಾಗಿ ಹೇಳಿದ್ದೇನೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಇನ್ನೊಂದು 28 ತಿಂಗಳು ಬಾಕಿ ಇದೆ. ಪಕ್ಷ ಇದೇ ರೀತಿ ಇದ್ರೆ ಮುಂದಿನ ಚುನಾವಣೆಗಳಲ್ಲಿ ದುರಂತ ಪರಿಣಾಮ ಕಾಣಬೇಕಾಗುತ್ತದೆ. ನಾಯಕತ್ವದ ವಿಚಾರದ ಬಗ್ಗೆ ಕೂಡಾ ಹೇಳಿದ್ದೇನೆ. ಯಡಿಯೂರಪ್ಪ ಅವರನ್ನು ಗೌರವಿಸಿ ಸಿಎಂ ಮಾಡಿದ್ದೇವೆ. ಆದರೆ ಇರೋ ಸತ್ಯ ಹೇಳಿದ್ದೇನೆ. ಮೋದಿ ಸಹ ಡೈನಾಸ್ಟಿ ರೂಲ್ ಪ್ರಜಾಪ್ರಭುತ್ವಕ್ಕೆ ಅಪಾಯ ಅಂತಾ ಹೇಳಿದ್ದಾರೆ. ಆದರೆ ಅದೇ ಇಲ್ಲಿ ನಡೆಯುತ್ತಿದೆ. ಬಹುಪರಾಕ್ ಹೇಳುವವರಿಗೆ ನನ್ನ ಮಾತು ಹಿಡಿಸದೇ ಇರಬಹುದು. ಆದರೆ ಬಿಜೆಪಿ ಎಂಎಲ್‌ಸಿಯಾಗಿ ಸತ್ಯ ಹೇಳಬೇಕು. ಇಲ್ಲವಾದರೆ ಪಕ್ಷಕ್ಕೆ ವಂಚನೆ‌, ದ್ರೋಹ ಮಾಡಿದಂತೆ ಎಂದರು.

The post ‘₹20,000 ಕೋಟಿಯ ಟೆಂಡರ್​​ನಿಂದ ವಿಜಯೇಂದ್ರ ಕಿಕ್ ಬ್ಯಾಕ್ ಪ್ಲ್ಯಾನ್’- ಹೆಚ್​​.ವಿಶ್ವನಾಥ್ ಗಂಭೀರ ಆರೋಪ appeared first on News First Kannada.

Source: newsfirstlive.com

Source link