ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರನ್ನ ದುರ್ಬಳಕೆ ಮಾಡಲಾಗಿದೆ ಅನ್ನೋ ಸುದ್ದಿ ಕಾಡ್ಗಿಚಿನಂತೆ ಕಳೆದ ಮೂರು ದಿನಗಳಿಂದ ಹತ್ತಿ ಈಗ ತಣ್ಣಗಾಗುತ್ತಿದೆ. ಈ ತಂಪಾದ ಸಮಯದಲ್ಲಿ ಡಿ ಬಾಸ್ ಮುಂದಿನ ಸಿನಿಮಾದ ಬಗ್ಗೆ ಹೊಸ ಸುಳಿವು ನಿರೀಕ್ಷೆಯ ಒಲವು ಶುರುವಾಗಿದೆ.

ಒಡೆಯ ಹಾಗೂ ರಾಬರ್ಟ್ ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವ ಸಿನಿಮಾ ಸೆಟ್​​​ನಲ್ಲಿ ಸೆಟಲ್ ಆಗುತ್ತಾರೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ರಾಜವೀರ ಮದಕರಿ ನಾಯಕನಾಗಿ ಕ್ಯಾಮೆರಾಗ ಕೈ ಮುಗಿದು ಹೋರಾಡುತ್ತಾರೆ ಅನ್ನೋಷ್ಟರಲ್ಲಿ ಕೋವಿಡ್ ನಿಬಂಧನೆಗಳು ಬಂದು ‘ರಾಜವೀರ ಮದಕರಿ ನಾಯಕ’ನ ಇತಿಹಾಸದ ಕಥೆಗೆ ಅಲ್ಪ ವಿರಾಮಬಿದ್ದಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜೊತೆಗೆ ‘ರಾಜವೀರ ಮದಕರಿ ನಾಯಕ’ ಸಿನಿಮಾವನ್ನ ಸದ್ಯ ಮಾಡದಿದ್ದರು, ಒಂದು ಕರ್ಮಶಿಯಲ್ ಸಿನಿಮಾವನ್ನ ದರ್ಶನ್ ಮಾಡ್ತಾರೆ ಎಂದಾಗಿತ್ತು. ಈಗ ಆ ಸಿನಿಮಾ ಕೂಡ ಸದ್ದಿಲ್ಲ ಸುದ್ದಿಲ್ಲ. ಹಾಗಾದ್ರೆ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು?

ಈಗ ದರ್ಶನ್ ಅವರ ಹೊಸ ಸಿನಿಮಾ ಸಮಾಚಾರ ಹೊರ ಬರೋ ಸೂಚನೆ ಕೊಟ್ಟಿದೆ. ಡಿ ಬಾಸ್ ಜೊತೆಗೆ ಈ ಹಿಂದೆ ಯಜಮಾನ ಸಿನಿಮಾವನ್ನ ಮಾಡಿ ಗೆದ್ದಿದ್ದರು ನಿರ್ಮಾಪಕಿ ಶೈಲಜಾ ನಾಗ್. ಈಗ ಮತ್ತೊಮ್ಮೆ ಶೈಲಜಾ ನಾಗ್ ನಿರ್ಮಾಣದಲ್ಲಿ ದರ್ಶನ್ ನಾಯಕತ್ವದ ಸಿನಿಮಾ ಬರಲಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ದರ್ಶನ್ ಅವರ ತೂಗುದೀಪ ನಿವಾಸಕ್ಕೆ ನಿರ್ಮಾಪಕಿ ಶೈಲಜಾ ನಾಗ್ ಭೇಟಿ.

ಶೈಲಜಾ ನಾಗ್ ದರ್ಶನ್ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಶೈಲಜಾ ನಾಗ್ ಮತ್ತು ಅವರ ಪತಿ ಬಿ.ಸುರೇಶ್ ನಟ ದರ್ಶನ್ ಅವರ ಜೊತೆಗೆ ಹಿಂದಿನಿಂದಲು ಉತ್ತಮ ಒಡನಾಟವನ್ನ ಇಟ್ಟುಕೊಂಡಿರುವವರು. ಯಜಮಾನ ಸಿನಿಮಾದ ಮೂಲಕ ಮತ್ತಷ್ಟು ಹತ್ತಿರವಾದವರು. ಯಜಮಾನ ಸಿನಿಮಾದ ನಂತರ ಮತ್ತೊಮ್ಮೆ ಶೈಲಜಾ ನಾಗ್ ಅವರ ನಿರ್ಮಾಣದ ಚಿತ್ರದಲ್ಲಿ ದರ್ಶನ್ ನಟಿಸುತ್ತಾರೆ ಎಂದಾಗಿತ್ತು. ಈಗ ಅಲಿಖಿತ ಒಪ್ಪಂದಕ್ಕೆ ಹೊಸ ಕಳೆ ಬಂದಿದೆ. ದರ್ಶನ್ ಅವರನ್ನ ಶೈಲಜಾ ನಾಗ್ ಭೇಟಿಯಾಗಿರೋದು ಹೊಸ ಸಿನಿಮಾದ ಮಾತುಕಥೆಗೆ ಎನ್ನಲಾಗುತ್ತಿದೆ. ಆದ್ರೆ ಇದಿನ್ನು ಅಧಿಕೃತವಾಗಿಲ್ಲ ಅಷ್ಟೆ.

ಹೊಸದೊಂದು ಕಮರ್ಶಿಯಲ್ ಸಿನಿಮಾದ ಮೂಲಕ ಅದ್ಭುತವಾಗಿ ರಂಜಿಸಬೇಕು ಅನ್ನೋ ಗುರಿಯಲ್ಲಿರೋ ದಾಸ ದರ್ಶನ್ ತೂಗುದೀಪ ಪವರ್ ಫುಲ್ ಕಥೆಯೊಂದಕ್ಕೆ ಕಾಯುತ್ತಿದ್ದಾರೆ. ಜೊತೆಗೆ ಸಂಪೂರ್ಣ ಥಿಯೇಟರ್​ಗಳೆಲ್ಲ ಓಪನ್ ಆಗ್ಲಿ ಆಮೇಲೆ ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸೋಣ ಅನ್ನೋದು ದರ್ಶನ್ ಅವ್ರ ನಿರ್ಧಾರವಂತೆ. ಒಟ್ಟಿನಲ್ಲಿ ದರ್ಶನ್ ಅವರ ಮುಂದಿನ ಸಿನಿಮಾದ ಯಾವುದು ಅನ್ನೋ ಮಿಸ್ಟ್ರಿ ಡಿ ಫ್ಯಾನ್ಸ್​ಗಳಲ್ಲಿ ಕಾಡಲಾರಂಭಿಸಿದೆ.

The post ₹25 ಕೋಟಿ ವಂಚನೆ ಪ್ರಯತ್ನದ ರಗಳೆ ನಡುವೆ ದರ್ಶನ್ ಅಭಿಮಾನಿಗಳಿಗೆ ಗುಡ್​​ನ್ಯೂಸ್​? appeared first on News First Kannada.

Source: newsfirstlive.com

Source link