ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ರಾಜಸ್ಥಾನದ ಜೈಪುರದಲ್ಲಿ ನಿರ್ಮಾಣವಾಗ್ತಿದೆ. ಅಭಿಮಾನಿಗಳನ್ನ ಉತ್ತೇಜಿಸುವಂತ ಗುಣಮಟ್ಟ, ವಿನೂತನ ಮೂಲ ಸೌಕರ್ಯಗಳನ್ನು ಒದಗಿದಲು ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್‌ಗೆ, 100 ಕೋಟಿ ರೂಪಾಯಿ ಅನುದಾನ ನೀಡಲು ಮಂಡಳಿ ಸಿದ್ಧವಾಗಿದೆ.

ವರದಿಗಳ ಪ್ರಕಾರ, ಹೊಸ ಕ್ರೀಡಾಂಗಣವು 75 ಸಾವಿರ ಆಸನಗಳ ಸಾಮರ್ಥ್ಯ ಹೊಂದುವ ಸಾಧ್ಯತೆ ಹೆಚ್ಚಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವಾಗಲಿದೆ. ಅಹ್ಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ನಮೋ ಕ್ರೀಡಾಂಗಣ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದ ಎರಡನೇ ದೊಡ್ಡ ಮೈದಾನವಾಗಿದೆ.

ಬಿಸಿಸಿಐನಿಂದ 100 ಕೋಟಿ ರೂಪಾಯಿ ಅನುದಾನ!
ಮುಂದಿನ 24ರಿಂದ 30 ತಿಂಗಳಿನಲ್ಲಿ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಪೂರ್ತಿಯಾಗುವ ನಿರೀಕ್ಷೆ ಇದೆ. 290 ಕೋಟಿ ರೂಪಾಪಿ ವೆಚ್ಚದಲ್ಲಿ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಇದರಲ್ಲಿ ಬ್ಯಾಂಕ್ ಲೋನ್ ಮೂಲಕ 100 ಕೋಟಿ ರೂಪಾಯಿ, ಬಿಸಿಸಿಐ 100 ರೂಪಾಯಿ ಹಾಗೂ ಆರ್​ಸಿಎಸ್​ ಪಾಂಡ್​ ಮೂಲಕ 90 ಕೋಟಿ ರೂಪಾಯಿ ಲಭ್ಯವಾಗಲಿದೆ. ಎರಡು ಹಂತಗಳಲ್ಲಿ ಸ್ಟೇಡಿಯಂ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಕ್ರೀಡಾಂಗಣದಲ್ಲಿ 44 ಪಿಚ್​​​ಗಳು, ಎರಡು ತರಬೇತಿ ಪಿಚ್​​, 4 ಕ್ರಿಕೆಟ್ ಅಕಾಡೆಮಿಗಳು ಹಾಗೂ ಹೋಟೆಲ್​, ಪಾರ್ಕಿಂಗ್ ಸೌಲಭ್ಯ ಹಾಗೂ ಜಿಮ್​ ಇರಲಿದೆ.

ಐಪಿಎಲ್​​ನಲ್ಲಿ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗೆ ಅನುಮತಿ ನೀಡುವ ವೇಳೆಗೆ ಕ್ರೀಡಾಂಗಣವೂ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದ್ದು, ಅಂತಾರಾಷ್ಟ್ರೀಯ ಕ್ರೀಡಾಂಗಣದ ನಿರ್ಮಾಣದಿಂದ ಫ್ರಾಂಚೈಸಿಗಳಿಗೆ ತವರಿನ ಅನುಭವ ಲಭ್ಯವಾಗಲಿದೆ. ಈಗಾಗಲೇ ಬಿಸಿಸಿಐ 2022ರ ಐಪಿಎಲ್​ನಲ್ಲಿ 9 ತಂಡಗಳನ್ನು ಭಾಗವಹಿಸಲು ಅನುಮತಿ ನೀಡಿದ್ದು, ಮುಂದಿನ ಜುಲೈನಲ್ಲಿ ಟೂರ್ನಿ ಆರಂಭವಾಗುವ ನಿರೀಕ್ಷೆ ಇದೆ.

The post ₹290 ಕೋಟಿ ವೆಚ್ಚದಲ್ಲಿ ಜೈಪುರದಲ್ಲಿ ವಿಶ್ವದ 3ನೇ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣ appeared first on News First Kannada.

Source: newsfirstlive.com

Source link