ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ಬೆನ್ನಲ್ಲೇ ಇದೀಗ ಆಕ್ಸಿಜನ್ ಸಿಲಿಂಡರ್ ದಂಧೆ ಕೂಡ ಹೆಚ್ಚಾಗಿದೆ. ಆಕ್ಸಿಜನ್​ ಸಿಲಿಂಡರ್​ ದಂಧೆಯ ವಿರುದ್ಧ ಸಿಸಿಬಿ ಸಮರ ಸಾರಿದ್ದು ರವಿಕುಮಾರ್​ ಎಂಬ ಆರೋಪಿಯನ್ನ ಬಂಧಿಸಿದೆ. ದುಪ್ಪಟ್ಟು ರೇಟ್​ಗೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡ್ತಿದ್ದ ರವಿಕುಮಾರ್​​ನನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಸಿಗಾ ಗ್ಯಾಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆರೋಪಿ ರವಿಕುಮಾರ್ ಸಿಗಾ ಗ್ಯಾಸಸ್​​ನ ಬ್ರ್ಯಾಂಚ್ ಇನ್ಚಾರ್ಜ್ ಆಗಿದ್ದು, ಈತ 47 ಲೀಟರ್ ಆಕ್ಸಿಜನ್​ ಸಿಲಿಂಡರನ್ನ 3 ಸಾವಿರ ಬೆಲೆಗೆ ಮಾರಾಟ ಮಾಡ್ತಿದ್ದ ಎನ್ನಲಾಗಿದೆ. ಸರ್ಕಾರ 47 ಲೀಟರ್ ಆಕ್ಸಿಜನ್​ಗೆ ₹300 ದರ ನಿಗದಿ ಮಾಡಿದೆ.

ಹೀಗಿದ್ದರೂ ನಿಗದಿಗಿಂತ ಹೆಚ್ಚು ಬೆಲೆಗೆ ಆಕ್ಸಿಜನ್ ಮಾರಾಟ ಮಾಡ್ತಿದ್ದಿದ್ದು ಬಯಲಾಗಿದೆ. ಸದ್ಯ ರವಿಕುಮಾರ್​ನನ್ನ ಅರೆಸ್ಟ್ ಮಾಡಿರೋ ಸಿಸಿಬಿ, ಐಪಿಸಿ ಸೆಕ್ಷನ್ 420, ಸೆಕ್ಷನ್ 27 DPCO(drug price control order), EC ಕಾಯ್ದೆಯ ಸೆಕ್ಷನ್​ 3 ಹಾಗೂ 7ರಅಡಿಯಲ್ಲಿ ಕೇಸ್ ದಾಖಲು ಮಾಡಿದ್ದು, ತನಿಖೆ ನಡೆಸುತ್ತಿದೆ

The post ₹300ರ ಆಕ್ಸಿಜನ್ ಸಿಲಿಂಡರ್ ₹3000ಕ್ಕೆ ಮಾರುತ್ತಿದ್ದ ಖದೀಮ ಅರೆಸ್ಟ್​ appeared first on News First Kannada.

Source: newsfirstlive.com

Source link