ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಸರ್ಕಾರದಿಂದ ₹41 ಕೋಟಿ ಹಣ ಬಂದಿದೆ. ಅದರಲ್ಲಿ ₹39 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಿರಿ. ₹39 ಕೋಟಿ ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂತಾ ಮಾಹಿತಿ ಕೊಡಿ ಎಂದು ಸಂಸದ ಪ್ರತಾಪ್​ ಸಿಂಹ ನಿನ್ನೆ ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ರೋಹಿಣಿ ಸಿಂಧೂರಿ ಮಾಧ್ಯಮಗಳ ಮೂಲಕ ಉತ್ತರಿಸಿದ್ದಾರೆ.

ಈ ಕುರಿತು ಮಾಹಿತಿಯ ಪತ್ರವನ್ನು ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಸಿಂಧೂರಿ, ಮೈಸೂರು ಜಿಲ್ಲೆಯಲ್ಲಿ 2020ರ ಮಾರ್ಚ್​​ ತಿಂಗಳಿನಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣ ಕಾಣಿಸಿಕೊಂಡ ನಂತರದಿಂದ ಇದುವರೆಗೂ ಸರ್ಕಾರದಿಂದ ವಿಪತ್ತು ಪರಿಹಾರ ನಿಧಿಯಡಿ ಒಟ್ಟು 41 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 36 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಕುರಿತು ಲೆಕ್ಕ ನೀಡಿದ್ದಾರೆ.

  1. ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಉಪಕರಣ, ಔಷಧಗಳು, ಪಿಪಿಇ ಕಿಟ್​​ಗಳು ಮಾಸ್ಕ್​​ ಮತ್ತು ಸ್ಟೇಷನರಿ ಇತ್ಯಾದಿಗೆ- 13 ಕೋಟಿ ರೂಪಾಯಿ
  2. ಐಸೋಲೇಷನ್​ ವ್ಯವಸ್ಥೆ ಮತ್ತು ಕೋವಿಡ್​ ಕೇರ್​​ ಸ್ಥಾಪನೆ ಮತ್ತು ನಿರ್ವಹಣೆ ಇತ್ಯಾದಿ- 5 ಕೋಟಿ ರೂಪಾಯಿ
  3. ಕ್ವಾರಂಟೀನ್​ಗೆ​​ ಒಳಪಟ್ಟವರಿಗೆ ಹೋಟೆಲ್​ ವಾಸ್ತವ್ಯ, ಅಂದಿನಿಂದ ಇಂದಿನವರೆಗೆ ರೋಗಿಗಳಿಗೆ ಊಟದ ವ್ಯವಸ್ಥೆಗೆ- 4 ಕೋಟಿ ರೂಪಾಯಿ
  4. ಮೈಸೂರು ಮೆಡಿಕಲ್​​ ಕಾಲೇಜಿಗೆ ಟೆಸ್ಟಿಂಗ್ ಮೆಟೀರಿಯಲ್ಸ್​ ಮತ್ತು ಕನ್ಸೂಮೆಬಲ್ಸ್​​ಗೆ- 7 ಕೋಟಿ ರೂಪಾಯಿ
  5. ಸ್ವಾಬ್​​ ಕಲೆಕ್ಷನ್​​​ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ- 1 ಕೋಟಿ ರೂಪಾಯಿ
  6. ವ್ಯಾಕ್ಸಿನೇಷನ್ ಮತ್ತು ಟೆಸ್ಟಿಂಗ್​​ ವಾಹನ ವ್ಯವಸ್ಥೆಗೆ- 4 ಕೋಟಿ ರೂಪಾಯಿ
  7. ಆಮ್ಲಜನಕ ಪೂರೈಕೆಗೆ- 1 ಕೋಟಿ ರೂಪಾಯಿ
  8. ಇತರೆ ವೆಚ್ಚಗಳು (ದೂರವಾಣಿ, ಇಂಟರ್ನೆಟ್​​, ಕಂಪ್ಯೂಟರ್​​, ಶಾಮಿಯಾನ, ಇತ್ಯಾದಿ)ಗೆ- 1 ಕೋಟಿ ರೂಪಾಯಿ

ಇದನ್ನೂ ಓದಿ: ₹39 ಕೋಟಿ ಯಾವುದಕ್ಕೆ ಖರ್ಚು ಮಾಡಿದ್ದೀರ? ಸಿಂಧೂರಿಗೆ ಲೆಕ್ಕ ಕೇಳಿದ ಪ್ರತಾಪ್​ಸಿಂಹ

ಇದನ್ನೂ ಓದಿ: ಪ್ರತಾಪ ಸಿಂಹ- ಜಿಲ್ಲಾಧಿಕಾರಿ ನಡುವೆ ‘ಪತ್ರ ಸಮರ’ – ಸಿಂಧೂರಿ ತಿರುಗೇಟು

The post ₹39 ಕೋಟಿ ಯಾವುದಕ್ಕೆಲ್ಲಾ ಖರ್ಚಾಗಿದೆ? ಪ್ರತಾಪ್​ಸಿಂಹ ಪ್ರಶ್ನೆಗೆ ಲೆಕ್ಕ ಕೊಟ್ಟ ಸಿಂಧೂರಿ appeared first on News First Kannada.

Source: newsfirstlive.com

Source link