₹40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ಕೊಟ್ಟ ಎನ್ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ

₹40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ಕೊಟ್ಟ ಎನ್ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ

ಗದಗ: ವೈದ್ಯೆ ದಿಶಾ ಮೇಲೆ ಅತ್ಯಾಚಾರ ಎಸಗಿ ಸುಟ್ಟುಹಾಕಿದ್ದ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿದ್ದ ವಿಶ್ವನಾಥ ಸಜ್ಜ‌ನರ ಅವರು ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ನೀಡಿದ್ದಾರೆ.

ತೆಲಂಗಾಣ ರಾಜ್ಯದ ಸೈಬರಾಬಾದ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಮೂಲತಃ ಗದಗ ಜಿಲ್ಲೆಯವರು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಔಷಧಿ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.

22 ಆಕ್ಸಿಜನ್ ಕಾನ್ಸ್ಂಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2000 ಕೋವಿಡ್ ಕಿಟ್, 20,000 ಮಾಸ್ಕ್​, 200 ಲೀಟರ್ ಸ್ಯಾನಿಟೈಸರ್, 1,000, ಫೇಸ್‌ಶೀಲ್ಡ್, 24 ಯುನಿಟ್ ರೆಮ್ಡೆಸಿವಿರ್  ಸೇರಿದಂತೆ ಇತರ ಔಷಧಿ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರ ಸಹೋದರ ಹುಬ್ಬಳ್ಳಿಯ ಸಾಯಿ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ.ಎಂ.ಸಿ.ಸಜ್ಜನರ ಅವರು ಶುಕ್ರವಾರ ಜಿಲ್ಲಾಡಳಿತದ ಭವನದ ಆವರಣದಲ್ಲಿ ವೈದ್ಯಕೀಯ ಔಷಧಿ ಸಾಮಾಗ್ರಿಗಳನ್ನು ಹಸ್ತಾಂತರಿಸಿದ್ದಾರೆ.

The post ₹40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ಕೊಟ್ಟ ಎನ್ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ appeared first on News First Kannada.

Source: newsfirstlive.com

Source link